ಶ್ರೀಲಂಕಾದಿಂದ ಅಶೋಕ್ ಲೇಲ್ಯಾಂಡ್‌ಗೆ 17 ದಶಲಕ್ಷದ ಆರ್ಡರ್
ಹಿಂದೂಜಾ ಸಂಸ್ಥೆಯ ವಾಣಿಜ್ಯ ಬ್ರಾಂಡ್ ಆಗಿರುವ ಅಶೋಕ್ ಲೇಲ್ಯಾಂಡ್, ನೆರೆಯ ಶ್ರೀಲಂಕಾ ರಾಷ್ಟ್ರದಿಂದ ಬರೋಬ್ಬರಿ 17 ದಶಲಕ್ಷದ (104 ಕೋಟಿ ರು.) ಆರ್ಡರ್ ಗಿಟ್ಟಿಸಿಕೊಂಡಿದೆ.
ಒಟ್ಟು 630 ಬಸ್ಸುಗಳ ನಿರ್ಮಾಣಕ್ಕೆ ಅಶೋಕ್ ಲೇಲ್ಯಾಂಡ್ ಆರ್ಡರ್ ಪಡೆದುಕೊಂಡಿದೆ. ಶ್ರೀಲಂಕಾದ ಖಾಸಗಿ ಬಸ್ ನಿರ್ವಾಹಕರಿಂದ ಆರ್ಡರ್ ಗಿಟ್ಟಿಸಿಕೊಳ್ಳಲಾಗಿದೆ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿದೆ.

ಈ ಹಿಂದೆಯೂ ಲಂಕಾಗೆ ಬಸ್ಸುಗಳನ್ನು ಪರಿಚಯಿಸಿದ್ದ ತನ್ನ ಸಾನಿಧ್ಯ ವ್ಯಕ್ತಪಡಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿರುವ ಅಶೋಕ್ ಲೇಲ್ಯಾಂಡ್ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಕೆ ದಸರಿ, ಪ್ರಸ್ತುತ ಆರ್ಡರ್ ಲಂಕಾದಲ್ಲಿ ನಮ್ಮ ಸಾನಿಧ್ಯವನ್ನು ಇನ್ನಷ್ಟು ಗಟ್ಟಿಪಡಿಸಲಿದ್ದು, ಅಲ್ಲದೆ ಇದು ಶ್ರೀಲಂಕಾ ಗ್ರಾಹಕರ ವಿಶ್ವಾಸಾರ್ಹತೆಗೆ ಇನ್ನಷ್ಟು ಪುರಾವೆಯಾಗಿದೆ ಎಂದಿದ್ದಾರೆ.
ನಿಮ್ಮ ಮಾಹಿತಿಗಾಗಿ ಲಂಕಾ ಅಶೋಕ್ ಲೇಲ್ಯಾಂಡ್ 1982ರಲ್ಲಿ ಅಸ್ಥಿತ್ವಕ್ಕೆ ಬಂದಿತ್ತಲ್ಲದೆ 1983ರಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತ್ತು.


Click it and Unblock the Notifications








