ಆಡಿ ಎ3 ಯಶಸ್ವಿ ಭಾರತ ಪ್ರವೇಶ; ಬೆಲೆ 22.95 ಲಕ್ಷ ರು.

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಆಡಿ, ಇತ್ತೀಚೆಗಷ್ಟೇ ಅತಿ ನೂತನ ಎ3 ಸೆಡಾನ್ ಕಾರನ್ನು ಭಾರತ ಮಾರುಕಟ್ಟೆಗೆ ಪರಿಚಯಿಸಿತ್ತು. ಇದರ ದೆಹಲಿ ಎಕ್ಸ್ ‌ಶೋ ರೂಂ ದರ 22.95 ರು.ಗಳಿಂದ ಟಾಪ್ ಎಂಡ್ ವೆರಿಯಂಟ್ ದರ 32.66 ಲಕ್ಷ ರು.ಗಳ ವರೆಗೆ ನಿಗದಿಯಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಹೊಸ ಆಡಿ ಎ3 ಲಭ್ಯವಾಗಲಿದೆ. ಅಲ್ಲದೆ ತನ್ನ ನೂತನ ಮಾದರಿಯ ಮಾರಾಟದಲ್ಲಿ ಈ ಜರ್ಮನಿಯ ಸಂಸ್ಥೆಯು ಅತಿ ಹೆಚ್ಚು ನಿರೀಕ್ಷೆಯನ್ನಿಟ್ಟುಕೊಂಡಿದೆ.


ಜರ್ಮಿನಿಯ ಲಗ್ಷುರಿ ಬ್ರಾಂಡ್ ಎತ್ತಿ ಹಿಡಿಯುತ್ತಿರುವ ಆಡಿ ಎ3 ಸೆಡಾನ್ ಕಾರು 2.0 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ನಾಲ್ಕು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಇದು 143 ಅಶ್ವಶಕ್ತಿ (320 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ವೆರಿಯಂಟ್, ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ)

  • ಅಟ್ರಾಕ್ಷನ್ - 22.95 ಲಕ್ಷ ರು.
  • ಪ್ರೀಮಿಯಂ - 25.95 ಲಕ್ಷ ರು.
  • ಪ್ರೀಮಿಯಂ ಪ್ಲಸ್ - 25.95 ಲಕ್ಷ ರು.
  • ಟೆಕ್ನಾಲಜಿ - 32.66 ಲಕ್ಷ ರು.

Audi A3
ಅದೇ ಹೊತ್ತಿಗೆ ಏಕಮಾತ್ರ ಪೆಟ್ರೋಲ್ ವೆರಿಯಂಟ್‌ನಲ್ಲಿ ಆಡಿ ಎ3 ಲಭ್ಯವಾಗಲಿದೆ. ಇದರ 1.8 ಲೀಟರ್ ಪೆಟ್ರೋಲ್ ಎಂಜಿನ್ 177 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು 28.95 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ವಿಶೇಷವೆಂದರೆ ಆಡಿ ಎ3 ಪೆಟ್ರೋಲ್ ಅಥವಾ ಡೀಸೆಲ್ ವೆರಿಯಂಟ್‌ಗಳು ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಾಗಿರುವುದಿಲ್ಲ. ಅಲ್ಲದೆ ಔರಾಂಗಬಾದ್‌ನ ಘಟಕದಲ್ಲಿ ಸ್ಥಳೀಯವಾಗಿ ನಿರ್ಮಾಣ ಪ್ರಕ್ರಿಯೆ ಆರಂಭಿಸಿರುವುದರಿಂದ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ಸಹಕಾರಿಯಾಗಿದೆ. ಅಂದರೆ ಆಡಿಯಿಂದ ಸ್ಥಳೀಯವಾಗಿ ನಿರ್ಮಾಣವಾಗುತ್ತಿರುವ ಮೊದಲ ಮಾದರಿಯೆಂಬ ಹೆಗ್ಗಳಿಕೆಗೂ ಆಡಿ ಎ3 ಪಾತ್ರವಾಗಿದೆ.

ಅಂದ ಹಾಗೆ ಮರ್ಸಿಡಿಸ್ ಬೆಂಝ್ ಎ ಕ್ಲಾಸ್, ಬಿ ಕ್ಲಾಸ್ ಮತ್ತು ಬಿಎಂಡಬ್ಲ್ಯು 1 ಸಿರೀಸ್ ಮಾದರಿಗಳಿಗೆ ನೂತನ ಆಡಿ ಎ3 ಪೈಪೋಟಿ ಒಡ್ಡುವ ನಿರೀಕ್ಷೆಯಿದೆ.

More from DriveSpark

Article Published On: Tuesday, August 12, 2014, 16:37 [IST]
English summary
Audi India has launched its A3 sedan today. The German automobile manufacturer has priced its sedan between INR 22,95,000 to INR 32,66,000 ex-showroom, Delhi. The sedan is the new addition to their product offering in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+