ಆಡಿ ಎ3 ಸೆಡಾನ್ ಬಿಡುಗಡೆಗೆ ಸಿದ್ಧ; ಬೆಲೆ ಎಷ್ಟು ಗೊತ್ತೇ?
ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ಎ3 ಸೆಡಾನ್ ಕಾರನ್ನು ಮುಂಬರುವ ಆಗಸ್ಟ್ ತಿಂಗಳಲ್ಲಿ ಲಾಂಚ್ ಮಾಡಲಿದೆ. ಇದರ ಬೆಲೆ 26 ಲಕ್ಷ ರು.ಗಳ ಅಸುಪಾಸಿನಲ್ಲಿರುವ ಸಾಧ್ಯತೆಯಿದೆ. ಪ್ರಸ್ತುತ ಕಾರು ಇದೀಗಷ್ಟೇ ಬಿಡುಗಡೆಗೊಂಡಿರುವ ಬೆಂಝ್ ಎಡಿಷನ್ 1 ಎ ಕ್ಲಾಸ್ ಹಾಗೂ ಬಿ ಕ್ಲಾಸ್ ಸೀಮಿತ ಆವೃತ್ತಿಗಳಿಗೆ ಪೈಪೋಟಿ ನೀಡಲಿದೆ.
ಸ್ಮರ್ಧಾತ್ಮಕ ದರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಡಿ ಎ3 ಬೇಸ್ ವೆರಿಯಂಟ್‌ಗಳಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಲೆಥರ್ ಒಳಮೈಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಹಾಗಿದ್ದರೂ ಟಾಪ್ ವೆರಿಯಂಟ್ ಅಲಾಯ್ ವೀಲ್, ಲೆಥರ್ ಇಂಟಿರಿಯರ್ ಮತ್ತು ಇನ್ನಿತರ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಬಹುನಿರೀಕ್ಷಿತ ಆಡಿ ಎ3 ಬಿಡುಗಡೆಯಾದ ಬೆನ್ನಲ್ಲೇ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ. ಇದು 1.8 ಲೀಟರ್ ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದ್ದು, 180 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 2.0 ಲೀಟರ್ ಡೀಸೆಲ್ ಮೋಟಾರು ಎಂಜಿನ್ 152 ಅಶ್ವಶಕ್ತಿ (320 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.
ಇವೆಲ್ಲದರ ಹೊರತಾಗಿ ಎಸ್ ಟ್ರಾನಿಕ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊರತಾಗಿ ಗ್ರಾಹಕರು ಬಯಸಿದರೆ ಆರು ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಪಡೆಯಬಹುದಾಗಿದೆ. ಇದು ಬೆಂಝ್ ಎ ಮತ್ತು ಬಿ ಕ್ಲಾಸ್ ಹೊರತಾಗಿ ಬೆಂಝ್ ಸಿಎಲ್‌ಎ ಮತ್ತು ಬಿಎಂಡಬ್ಲ್ಯು 1 ಸಿರೀಸ್ ಆವೃತ್ತಿಗಳಿಗೂ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








