ಆಡಿ ಎ8ಎಲ್ ಇಂಡಿಯಾ ಲಾಂಚ್; ಬೆಲೆ 1.12 ಕೋಟಿ ರು.

By Nagaraja

ದುಬೈನಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಐಷಾರಾಮಿ ಆಡಿ ಎ8ಎಲ್ ಇಂಡಿಯಾ ಲಾಂಚ್ ನೆರವೇರಿದೆ. ಜರ್ಮನಿಯ ಐಷಾರಾಮಿ ಸಂಸ್ಥೆಯ ಈ ನೂತನ ವೆರಿಯಂಟ್ ಬೆಲೆ 1.12 ಕೋಟಿ ರು.ಗಳಾಗಿವೆ.

ವೈಶಿಷ್ಟ್ಯಗಳೇನು..?
ನೂತನ ಆಡಿ ಎ8ಎಲ್ ಮಾದರಿಯ ಪ್ರಮುಖ ವೈಶಿಷ್ಟ್ಯವೆಂದರೆ ಕರಕುಶಲ ಒಳಮೈ ಪಡೆದುಕೊಳ್ಳಲಿದೆ. ಜತೆಗೆ ತಾಜಾ ತಂತ್ರಜ್ಞಾನ ಆಳವಡಿಸಲಾಗಿದ್ದು, ಕಸ್ಟಮೈಸ್ಡ್ ಅವಕಾಶವೂ ಇರಲಿದೆ.

ಈ ಬಗ್ಗೆ ಮಾತನಾಡಿರುವ ಆಡಿ ಇಂಡಿಯಾ ಅಧ್ಯಕ್ಷ, ಜೋ ಕಿಂಗ್, ಹೊಸತಾದ ಆಡಿ ಎ8ಎಲ್ ಬಿಡುಗಡೆಯೊಂದಿಗೆ ಮಾರುಕಟ್ಟೆಯಲ್ಲಿ ಆಡಿ ನಾಯಕತ್ವದ ಸ್ಥಾನ ಇನ್ನಷ್ಟು ಬಿಗುಗೊಂಡಿದೆ. ಇದು ಐಷಾರಾಮಿ ಜತೆಗೆ ಆರಾಮದಾಯಕ, ಸೂಪರ್ ಕಲೆಗಾರಿಕೆ, ಹಗುರ ಭಾರದ ನಿರ್ಮಾಣ ಹಾಗೆಯೇ ಗರಿಷ್ಠ ತಂತ್ರಜ್ಞಾನವನ್ನು ಪ್ರತಿಬಿಂಬಿಸಲಿದೆ ಎಂದಿದೆ.


ಕಸ್ಟಮೈಸ್ಡ್ ಆಯ್ಕೆ...
ಆಡಿ ಎ8ಎಲ್ ಕಾರಿನಲ್ಲಿ, ಮಿತಿಯಿಲ್ಲದ ಕಸ್ಟಮೈಸ್ಢ್ ಆಯ್ಕೆ ಲಭ್ಯವಿದ್ದು, ಇದರಂತೆ 111 ಎಕ್ಸ್‌ಟೀರಿಯರ್ ಕಲರ್, 23 ಲೆಥರ್ ಕಲರ್, 27 ಕಸ್ಟಮೈಸ್ಡ್ ಮಾಡಬಹುದಾದ ಭಾಗಗಳು ಹಾಗೂ 12 ಮರದ ಕೆತ್ತನೆಗಳು ಸೇರಿವೆ. ಅಷ್ಟೇ ಅಲ್ಲದೆ ಗ್ರಾಹಕರು ಬಯಸಿದ್ದಲ್ಲಿ ಹೆಡ್ ರೆಸ್ಟ್ ಲೊಗೊ, ಡೋರ್ ಸಿಲ್ ಟ್ರಿಮ್ ಮತ್ತು ಎಕ್ಸ್‌ಕ್ಲೂಸಿವ್ ಫೋಲ್ಡಿಂಗ್ ಟೇಬಲ್ ಸಹ ವೈಯಕ್ತಿಕರಣಗೊಳಿಸಬಹುದಾಗಿದೆ.

ಆರಾಮದಾಯಕತೆ...
ವೆಂಟಿಲೇಷನ್, ಅಡಾಪ್ಟಿವ್ ಏರ್ ಸಸ್ಷೆಷನ್, ಆಡಿ ಡ್ರೈವ್ ಸೆಲೆಕ್ಟ್, ಆಪ್ಷನಲ್ ರಿಯರ್ ಸೀಟ್ ಎಕ್ಸಿಕೂಟಿವ್ ಪ್ಯಾಕೇಜ್, ಬ್ಯಾಂಗ್ ಆಂಡ್ ಓಲ್ಫ್‌ಸೆನ್ ಸೌರಂಡ್ ಸೌಂಡ್ ಸಿಸ್ಟಂ, ಪಾರ್ಕ್ ಅಸಿಸ್ಟ್, ಸೌರಂಡ್ ವ್ಯೂ ಮಿರರ್, ಪ್ಯಾನೋರಾಮಿಕ್ ಸನ್‌ರೂಫ್, ಹೆಡ್ ಅಪ್ ಡಿಸ್‌ಪ್ಲೇ, ಆಡಿ ವೈರ್‌ಲೆಸ್ ಇಂಟರ್‌ನೆಟ್ ಆಸ್ಸೆಸ್ ಜತೆಗೆ ಹಲವಾರು.

Audi A8L

ಎಂಜಿನ್..
ಮೂರು ಎಂಜಿನ್ ಆಯ್ಕೆಗಳಲ್ಲಿ ಆಡಿ ಎ8ಎಲ್ ಲಭ್ಯವಿರುತ್ತದೆ. ಅವುಗಳೆಂದರೆ ಎರಡು ಡೀಸೆಲ್ ಹಾಗೂ ಪೆಟ್ರೋಲ್.
ವಿ8 ಬೈಟರ್ಬೊ 4.0 ಟಿಎಫ್‌ಎಸ್‌ಐ (435 ಅಶ್ವಶಕ್ತಿ)
3.0 ಟಿಡಿಐ ಜತೆ 250 ಅಶ್ವಶಕ್ತಿ
4.2 ಟಿಡಿಐ ಜತೆ 385 ಅಶ್ವಶಕ್ತಿ

ಬೆಲೆ: 11,295,000 ರು. (ದೆಹಲಿ ಎಕ್ಸ್ ಶೋ ರೂಂ)

More from DriveSpark

Article Published On: Monday, May 5, 2014, 12:25 [IST]
English summary
Audi has brought its flagship model to India. The Audi A8L for India was launched in a special event held in Dubai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+