ಗುಣಮಟ್ಟದ ಪ್ರಶಸ್ತಿ; ಆಡಿ ಹ್ಯಾಟ್ರಿಕ್ ಸಾಧನೆ
ಸತತ ಮೂರನೇ ಬಾರಿಗೂ 'ಒಟ್ಟು ಗುಣ್ಣಮಟ್ಟದ ಪ್ರಶಸ್ತಿ'ಗೆ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಆಡಿ ಭಾಜನವಾಗಿದೆ. ಐಷಾರಾಮಿ ವಿಭಾಗದಲ್ಲಿ ಆಡಿ ಇಂತಹದೊಂದು ಸಾಧನೆ ಮಾಡಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಆಡಿ ಅಮೆರಿಕಾದ ಸ್ಕಾಟ್ ಕಿಯೋಘ್, ನಮ್ಮ ಚಾಲಕರಿಗೆ ಅತ್ಯುತ್ತಮ ಮಾಲಿಕತ್ವ ಅನುಭವ ಪ್ರದಾನ ಮಾಡಲಿದ್ದೇವೆ ಎಂದಿದ್ದಾರೆ.
ಆಡಿ ಎ5, ಕ್ಯೂ5, ಹಾಗೂ ಕ್ಯೂ7 ಮಾದರಿಗಳ ಯಶಸ್ಸಿನೊಂದಿಗೆ ಆಡಿ ಅತ್ಯುತ್ತಮ ಐಷಾರಾಮಿ ಬ್ರಾಂಡ್ 2014 ಪ್ರಶಸ್ತಿಗೆ ಅರ್ಹವಾಗಿದೆ.

ಎ5
ಅಂದತೆ ಹಾಗೂ ನಿರ್ವಹಣೆಗೆ ಪ್ರತೀಕವಾಗಿರುವ ಆಡಿ ಎ5 ಸೆಡಾನ್, 2.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು ಕ್ವಾಟ್ರೊ ಆಲ್ ವೀಲ್ ಡ್ರೈವ್ ತಂತ್ರಜ್ಞಾನದ ಜೊತೆಗೆ 6 ಸ್ಪೀಡ್ ಮ್ಯಾನುವಲ್ ಅಥವಾ ಟ್ರಿಪ್‌ಟ್ರಾನಿಕ್ 8 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.
ಕ್ಯೂ5
ನಯವಾದ ಹಾಗೂ ಸಮರ್ಥ ತಂತ್ರಜ್ಞಾನಕ್ಕೆ ಪ್ರಶಸ್ತಿಗೆ ಅರ್ಹವಾಗಿರುವ ಕ್ಯೂ5 2.0 ಲೀಟರ್ ಟರ್ಬೊಚಾರ್ಜ್ ಡೀಸೆಲ್ ಎಂಜಿನ್ ಹೊಂದಿದೆ. ಇದು ಹೈಬ್ರಿಡ್ ಆಯ್ಕೆಯನ್ನು ಹೊಂದಿರುತ್ತದೆ.
ಕ್ಯೂ7
ಅತ್ಯುತ್ತಮ ಒಳಮೈಗೆ ಹೆಸರು ಗಿಟ್ಟಿಸಿಕೊಂಡಿರುವ ಕ್ಯೂ, ಸೀಟು ಹೀಟಿಂಗ್ ಆಯ್ಕೆ, 12 ವಿಧದ ಕ್ರಿಯಾತ್ಮಕ ಮುಂಭಾಗದ ಸೀಟು, ಹೊಂದಾಣಿಸಬಹುದಾಗ ಮಧ್ಯ ಹಾಗೂ ಮಡಚಬಹುದಾಗ ಕೊನೆಯ ಸಾಲಿನ ಸೀಟು ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ ಗ್ರಾಹಕರಿಗೆ 3.0 ಲೀಟರ್ ಪೆಟ್ರೋಲ್ ಹಾಗೂ ವಿ6 ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡುತ್ತದೆ.


Click it and Unblock the Notifications








