ಆಡಿ 10 ಸಾವಿರ ಮೈಲುಗಲ್ಲು ಮೊದಲ ಲಗ್ಷುರಿ ಬ್ರಾಂಡ್
ದೇಶದ ಐಷಾರಾಮಿ ಕಾರುಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವರ್ಷವೊಂದರಲ್ಲಿ 10,000 ಯುನಿಟ್ ಮಾರಾಟ ದಾಖಲಿಸಿಕೊಂಡಿರುವ ಜರ್ಮನಿ ಮೂಲದ ಆಡಿ ಇಂಡಿಯಾ, ನೂತನ ಮೈಲುಗಲ್ಲನ್ನು ಸ್ಥಾಪಿಸಿದೆ.
ಈ ಮೂಲಕ ದೇಶದ ವಾಹನೋದ್ಯಮ ಇತಿಹಾಸದಲ್ಲಿ ಲಗ್ಷುರಿ ಕಾರು ಬ್ರಾಂಡ್‌ನಲ್ಲಿ ವರ್ಷವೊಂದರಲ್ಲಿ 10,000 ಯುನಿಟ್ ಮಾರಾಟ ತಲುಪಿದ ಮೊದಲ ಐಷಾರಾಮಿ ಕಾರು ಬ್ರಾಂಡ್ ಎಂಬ ಹೆಗ್ಗಳಿಕೆಗೆ ಆಡಿ ಪಾತ್ರವಾಗಿದೆ.

2013ನೇ ಸಾಲಿನಲ್ಲಿ ಶೇಕಡಾ 11ರಷ್ಟು ವೃದ್ಧಿ ದರ ದಾಖಲಿಸಿರುವ ಆಡಿ ಒಟ್ಟಾರೆಯಾಗಿ 10,002 ಯುನಿಟ್ ಮಾರಾಟ ದಾಖಲಿಸಿಕೊಂಡಿದೆ. ಕಳೆದ ಬಾರಿಯಿದು 9,003ರಷ್ಟಿತ್ತು. 2009ನೇ ಇಸವಿಯಲ್ಲಿ ಮರ್ಡಿಸಿಡ್ ಬೆಂಝ್ ಹಿಂದಿಕ್ಕಿದ ಬಿಎಂಡಬ್ಲ್ಯು ಅಗ್ರಸ್ಥಾನ ಅಲಂಕರಿಸಿತ್ತು. ಆದರೆ ಮುಂದುವರಿದ ಬೆಳವಣಿಗೆಯಲ್ಲಿ ಬಿಎಂಡಬ್ಲ್ಯು ಹಿಂದಕ್ಕೆ ತಳ್ಳಿರುವ ಆಡಿ ದೇಶದ ಐಷಾರಾಮಿ ಕಾರುಗಳ ಚುಕ್ಕಾಣಿ ಹಿಡಿದಿದೆ.
ಹಾಗಿದ್ದರೂ ಬಿಎಂಡಬ್ಲ್ಯು ಮಾರಾಟ ಸಂಖ್ಯೆ ಇನ್ನಷ್ಟೇ ಹೊರಬೀಳಬೇಕಾಗಿದೆ. ಉಳಿದಂತೆ ಒಟ್ಟು 9,003 ಯುನಿಟ್ ಮಾರಾಟ ಕಂಡುಕೊಂಡಿರುವ ಮರ್ಸಿಡಿಸ್ ಬೆಂಝ್ ಶೇಕಡಾ 31.62ರಷ್ಟು ಏರಿಕೆ ದಾಖಲಿಸಿದೆ.


Click it and Unblock the Notifications








