40 ಲಕ್ಷ ದುಬಾರಿಯ ಆಡಿ ಎ4 ಸ್ಪೋರ್ಟ್ ವೆರಿಯಂಟ್ ಲಾಂಚ್
ಪ್ರೀಮಿಯಂ ಕಾರುಗಳೆಂದರೆ ಬಹುಬೇಗನೇ ಮರ್ಸಿಡಿಸ್ ಬೆಂಝ್ ಮತ್ತು ಬಿಎಂಡಬ್ಲ್ಯು ಜೊತೆಗೆ ನೆನಪಿಗೆ ಬರುವ ಹೆಸರು ಅಂದರೆ ಆಡಿ. ವಿಶೇಷವೆಂದರೆ ಈ ಮೂರು ವಾಹನ ತಯಾರಕ ಸಂಸ್ಥೆಗಳು ಜರ್ಮನಿ ದೇಶಕ್ಕೆ ಸೇರಿವೆ.
ಪ್ರಸ್ತುತ ಬೆಂಝ್, ಬಿಎಂಡಬ್ಲ್ಯು ಮತ್ತು ಆಡಿ ನಡುವೆ ತ್ರಿವಳಿ ಪೈಪೋಟಿ ಕಂಡುಬರುತ್ತಿದೆ. ಈ ನಡುವೆ 39.95 ಲಕ್ಷ ರುಪಾಯಿಗಳಷ್ಟು ದುಬಾರಿಯ (ಎಕ್ಸ್ ಶೋ ರೂಂ ಮುಂಬೈ) ಎ4 ಸ್ಪೋರ್ಟ್ ವೆರಿಯಂಟ್ ಅನ್ನು ಯಾವುದೇ ಸದ್ದಿಲ್ಲದೆ ಬಿಡುಗಡೆ ಮಾಡಿರುವ ಆಡಿ ಸಂಸ್ಥೆಯು ನಿಕಟ ಸ್ಪರ್ಧಿಗಳನ್ನು ಆಶ್ಚರ್ಯಚಕಿತಗೊಳಿಸಿದೆ.

ಈ ಮಿಡ್ ಲೆವೆಲ್ ವೆರಿಯಂಟ್ ಆಡಿ ಎ4 ಟೆಕ್ನಾಲಜಿ ಮತ್ತು ಎ4 ಪ್ರೀಮಿಯಂ ವೆರಿಯಂಟ್‌ಗಳ ನಡುವೆ ಗುರುತಿಸಿಕೊಳ್ಳಲಿದೆ.
ಸ್ಪರ್ಧಿ ಯಾರು?
ಹೊಸ ಖರೀದಿಗಾರರಿಗೆ ಇದೀಗ ಹೆಚ್ಚಿನ ಆಯ್ಕೆ ಮುಂದಿಟ್ಟಿರುವ ಆಡಿ, ಇನ್ನಷ್ಟೇ ಬಿಡುಗಡೆಯಾಗಲಿರುವ ಬೆಂಝ್ ಸಿ ಕ್ಲಾಸ್ ಸೆಡಾನ್ ಕಾರಿಗೆ ಸವಾಲಾಗಲಿದೆ.
ಹೊರಮೈ...
ಕಾರಿನ ಎಕ್ಸ್‌ಟೀರಿಯರ್ ಗಮನಿಸಿದಾಗ ಆಡಿ ಎ4 ಪ್ರೀಮಿಯಂ ಸ್ಪೋರ್ಟ್ ವೆರಿಯಂಟ್, ಸ್ವಲ್ಪ ತಿರುಚಿದ ಫ್ರಂಟ್ ಬಂಪರ್, ವಿಂಗ್ ಮಿರರ್‌ನಲ್ಲಿ ಕಾರ್ಬನ್ ಬ್ಲ್ಯಾಕ್ ಸ್ಟೈಲಿಂಗ್ ಪ್ಯಾಕೇಜ್, ಡೋರ್ ಮೌಲ್ಡಿಂಗ್ ಮತ್ತು ವಿಂಡೋ ಸಿಲ್ಸ್ ಪಡೆದುಕೊಂಡಿದೆ. ಅಂತೆಯೇ 20 ಸ್ಪೋಕ್ 17 ಇಂಚು ಅಲಾಯ್ ವೀಲ್ ಸಹ ಕಂಡುಬರಲಿದೆ.

ಬಣ್ಣಗಳು
ಎರಡು ಎಕ್ಸ್‌ಟೀರಿಯರ್ ಬಣ್ಣಗಳಲ್ಲಿ ಇದು ಆಗಮನವಾಗಲಿದೆ. ಅವುಗಳೆಂದರೆ ಕೆಂಪು ಹಾಗೂ ಬಿಳುಪು. ಸ್ಟಾಂಡರ್ಡ್ ಎ4 ಆವೃತ್ತಿಯಲ್ಲಿರುವ ಡ್ಯುಯಲ್ ಟೋನ್ ಬದಲಾಗಿ ಇದು ಆಲ್ ಬ್ಲ್ಯಾಕ್ ಇಂಟಿರಿಯರ್ ಪಡೆದುಕೊಳ್ಳಲಿದೆ.
ಎಂಜಿನ್
ಇನ್ನು ನೂತನ ಆಡಿ ಎ4 ಸ್ಪೋರ್ಟ್ ವೆರಿಯಂಟ್ ಎಂಜಿನ್ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದ್ದು, ಇದರ 2.0 ಲೀಟರ್ ಟಿಡಿಐ ಮೋಟಾರು ಎಂಜಿನ್ 177 ಅಶ್ವಶಕ್ತಿ (380 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದರ ಸ್ಟಾಂಡರ್ಡ್ ವೆರಿಯಂಟ್ 134 ಬಿಎಚ್‌ಪಿ (320 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ.


Click it and Unblock the Notifications