ಸದ್ಯದಲ್ಲೇ ಆಡಿ ಎಸ್3 ಕ್ಯಾಬ್ರಿಯೊಲೆಟ್ ಲಾಂಚ್
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ ಸದ್ಯದಲ್ಲೇ ಬಹುನಿರೀಕ್ಷಿತ ಆಡಿ ಎಸ್3 ಕ್ಯಾಬ್ರಿಯೊಲೆಟ್ ಲಾಂಚ್ ಆಗಲಿದೆ. ಇದು 75000 ಅಮೆರಿಕನ್ ಡಾಲರುಗಳಷ್ಟು ದುಬಾರಿಯೆನಿಸಲಿದೆ.
ನೂತನ ಆಡಿ ಎಸ್3 ಕ್ಯಾಬ್ರಿಯೊಲೆಟ್ 2.0 ಲೀಟರ್ ಫೋರ್ ಸಿಲಿಂಡರ್ ಗ್ಯಾಸೋಲೈನ್ ಎಂಜಿನ್ ಪಡೆಯಲಿದೆ. ಇದು 221 ಕೆಡಬ್ಲ್ಯು (380 ಎನ್‌ಎಂ ಟಾರ್ಕ್) ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಹಾಗೆಯೇ ಮ್ಯಾನುವಲ್ ಜತೆಗೆ ಸಿಕ್ಸ್ ಸ್ಪೀಡ್ ಎಸ್ ಟ್ರಾನಿಕ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಇದು ಆಡಿಯ ಕ್ವಾಟ್ರೊ ಆಲ್ ವೀಲ್ ಡ್ರೈವ್ ವ್ಯವಸ್ಥೆಯಡಿಯಲ್ಲಿ ಚಲಿಸಲಿದೆ.
ಸಂಸ್ಥೆಯ ಪ್ರಕಾರ ಆಡಿ ಎಸ್3 ಕ್ಯಾಬ್ರಿಯೊಲೆಟ್ ಕೇವಲ 5.4 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 7.1 ಲೀಟರ್‌ನಲ್ಲಿ 100 ಕೀ.ಮೀ. ವರೆಗೆ ಸರಾಗವಾಗಿ ಸಾಗಬಹುದಾಗಿದೆ.


Click it and Unblock the Notifications