ಆಡಿ ಆರ್‌ಎಸ್7 ಸ್ಪೋರ್ಟ್ಸ್‌ಬ್ಯಾಕ್ ಅನಾವರಣ
ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 2014 ಆಟೋ ಎಕ್ಸ್ ಪೋದಲ್ಲಿ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಆಡಿ, ಆರ್‌ಎಸ್7 ಸ್ಪೋರ್ಟ್ಸ್‌ಬ್ಯಾಕ್ ಅನಾವರಣಗೊಳಿಸಿದೆ.
ಆಡಿ ನೂತನ ಮಾದರಿ ಎ, ಎಸ್‌ಕ್ಯೂ5 ಜತೆ ಸ್ಥಾನವನ್ನು ಹಂಚಿಕೊಳ್ಳಲಿದೆ. ಈ ಹಿಂದೆ ಜನವರಿ 14ರಂದು ಆಡಿ ಸಂಸ್ಥೆಯು ಅತ್ಯಂತ ಪವರ್‌ಫುಲ್ ಆರ್‌ಎಸ್7 ಬಿಡುಗಡೆಗೊಳಿಸಿತ್ತು. ಪ್ರಸ್ತುತ ಕಾರು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಎ7 ಲಗ್ಷುರಿ ಕಾರು ತಲಹದಿಯಲ್ಲಿ ರಚಿಸಲಾಗಿದೆ. ಇದರ ಎಕ್ಸ್ ಶೋ ರೂಂ ದರ 1.29 ರು.ಗಳಾಗಿತ್ತು.

ಇದರ 4.0 ಲೀಟರ್ ಟಿಎಫ್‌ಎಸ್‌ಐ ಟ್ವಿನ್-ಟರ್ಬೊ ವಿ8 ಎಂಜಿನ್ 560 ಬಿಎಚ್‌ಪಿ (700 ಎನ್‌ಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ. ಈ ಕಾರು ಕೇವಲ 3.9 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಚಿರಿಸಲಿದೆ.
ಇದೀಗ ಹೊರಮೈ ಪರಿಷ್ಕೃತಗೊಳಿಸಿ ಎ7 ಸ್ಪೋರ್ಟ್ಸ್ ಬ್ಯಾಕ್ ಪ್ರದರ್ಶಿಸಲಾಗಿದೆ. ಇದು ಬಿಎಂಡಬ್ಲ್ಯು ಎಂ ಮತ್ತು ಮರ್ಸಿಡಿಸ್ ಬೆಂಜ್ ಇ63 ಎಎಂಜಿ ಆವೃತ್ತಿಗಳಿಗೆ ಪೈಪೋಟಿ ಒಡ್ಡಲಿದೆ.



Click it and Unblock the Notifications