ಮುಂದಿನ ವರ್ಷ ಆಡಿಯಿಂದ 10 ಹೊಸ ಮಾದರಿಗಳ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ, 2015ನೇ ಸಾಲಿನಲ್ಲಿ 10 ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಈ ಮೂಲಕ ದೇಶದ ಪ್ರೀಮಿಯಂ ಕಾರುಗಳ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ನಿರೀಕ್ಷೆ ಹೊಂದಿದೆ.

ಜರ್ಮನಿ ಮೂಲದವರೇ ಆಗಿರುವ ಮರ್ಸಿಡಿಸ್ ಬೆಂಝ್ ಹಾಗೂ ಬಿಎಂಡಬ್ಲ್ಯುಗಳಂತಹ ಅಗ್ರ ವಾಹನ ತಯಾರಿಕ ಸಂಸ್ಥೆಗಳಿಂದ ಎದುರಾಗಿರುವ ಪೈಪೋಟಿಯನ್ನು ಗಮನಿಸಿರುವ ಆಡಿ ಇನ್ನು ಹೆಚ್ಚಿನ ಮಾದರಿಗಳತ್ತ ಗಮನ ಹರಿಸಿದೆ.

audi

ಈ ಎಲ್ಲದರ ಮೂಲಕ ಮುಂದಿನ ಸಾಲಿನಲ್ಲಿ ಎರಡು ಅಂಕಿಗಳ ವೃದ್ಧಿಯನ್ನು ಆಡಿ ಗುರಿಯಿರಿಸಿಕೊಂಡಿದೆ. ಇದೀಗಷ್ಟೇ ಎ3 ಕ್ಯಾಬ್ರಿಯೊಲೆಟ್ ಬಿಡುಗಡೆ ಮಾಡಿದ್ದ ಸಂಸ್ಥೆಯು ದೇಶಕ್ಕೆ ವಿದೇಶಿ ಶೈಲಿಯ ಓಪನ್ ಟಾಪ್ ಕಾರು ಪರಿಚಯಿಸಿತ್ತು.

ಅಂದ ಹಾಗೆ ನವೆಂಬರ್ ತಿಂಗಳಲ್ಲಿ 10,000 ಯುನಿಟ್‌ಗಳ ಮಾರಾಟ ಕಾಯ್ದುಕೊಂಡಿದ್ದ ಆಡಿ ಸುಸ್ಥಿರ ಬೆಳವಣಿಗೆಯನ್ನು ಕಾಯ್ದುಕೊಂಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 10,003 ಯುನಿಟ್ ಮಾರಾಟ ಕಂಡುಕೊಂಡಿತ್ತು.

ಪ್ರಸ್ತುತ ದೇಶದಲ್ಲಿ 17 ಮಾದರಿಗಳನ್ನು ಮಾರಾಟ ಮಾಡುತ್ತಿರುವ ಆಡಿ ಮುಂದಿನ ವರ್ಷ ಆರ್8 ಎಲ್‌ಎಂಎಕ್ಸ್ ಮತ್ತು ಟಿಟಿ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಇದು ಆಡಿ ಯೋಜನೆಯ 10 ಮಾದರಿಗಳ ಭಾಗಿಯಾಗಿರಲಿದೆ.

Article Published On: Saturday, December 13, 2014, 9:04 [IST]
English summary
German automobile manufacturer Audi, has plans of launching 10 new models in 2015, to maintain its crown as the leader in the luxury car segment in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+