ಬೆಂಟ್ಲಿಯ ಮೊದಲ ಎಸ್‌ಯುವಿ ಟೀಸರ್ ನಿರೀಕ್ಷಿಸಿ
ಈಗಾಗಲೇ ಚೊಚ್ಚಲ ಎಸ್‌ಯುವಿ ಬಿಡುಗಡೆ ಮಾಡುವುದಾಗಿ ಘೋಷಿಸಿರುವ ಜಗತ್ತಿನ ಐಕಾನಿಕ್ ಸಂಸ್ಥೆಯಾಗಿರುವ ಬೆಂಟ್ಲಿ, ಈ ಪ್ಲಗ್ ಇನ್ ಹೈಬ್ರಿಡ್ ಮಾದರಿಯ ಟೀಸರ್ ವೀಡಿಯೋ ಇನ್ನು ಕೆಲವೇ ತಿಂಗಳಲ್ಲಿ ಬಿಡುಗಡೆ ಮಾಡಲಿದೆ.
ಈಗಾಗಲೇ ಮಾರ್ಚ್ ತಿಂಗಳಲ್ಲಿ ಮೊದಲ ಟೀಸರ್ ಚಿತ್ರ ಬಿಡುಗಡೆ ಮಾಡಿದ್ದ ಬೆಂಟ್ಲಿ, ಸಂಪೂರ್ಣ ಪುನರ್ ನಿರ್ಮಿತ ವಿನ್ಯಾಸದ ಎಸ್‌ಯುವಿ ಮಾದರಿಯನ್ನು ಪ್ರದರ್ಶಿಸಿತ್ತು.

ಇಎಕ್ಸ್‌ಪಿ-9 ಕಾನ್ಸೆಪ್ಟ್ ಎಸ್‌ಯುವಿ ಮೂಲ ವಿನ್ಯಾಸ ಪಡೆದುಕೊಂಡಿರುವ ಹೊಸ ಮಾದರಿಯು 2016ನೇ ಸಾಲಿನಲ್ಲಿ ಬಿಡುಗಡೆಯಾಗಲಿದೆ.
ಇದೀಗ ಮುಂಬರುವ ಪ್ಯಾರಿಸ್ ಆಟೋ ಶೋದಲ್ಲಿ ಟೀಸರ್ ವೀಡಿಯೋ ಬಿಡುಗಡೆ ಮಾಡುವ ಯೋಜನೆಯಲ್ಲಿರುವ ಬೆಂಟ್ಲಿ, ಈ ಮೂಲಕ ನಿರ್ಮಾಣ ಹಂತವನ್ನು ತೋರಿಸುವ ಮೂಲಕ ವಾಹನ ಪ್ರಿಯರಲ್ಲಿ ಇನ್ನಷ್ಟು ಕುತೂಹಲತೆ ಸೃಷ್ಟಿ ಮಾಡುವ ಪ್ರಯತ್ನದಲ್ಲಿದೆ.



Click it and Unblock the Notifications








