2016ನೇ ಸಾಲಿನಲ್ಲಿ ಬೆಂಟ್ಲಿ ದುಬಾರಿ ಎಸ್‌ಯುವಿ ಪ್ರವೇಶ
ಎರಡು ವರ್ಷಗಳ ಹಿಂದೆ ಅಂದರೆ 2012ನೇ ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನಗೊಂಡಿದ್ದ ಬೆಂಟ್ಲಿ ಇಎಕ್ಸ್‌ಪಿ-9 ಎಸ್‌ಯುವಿ ಕೊನೆಗೂ ನಿರ್ಮಾಣ ಹಂತ ತಲುಪುವುದಕ್ಕೆ ಮುಹೂರ್ತ ನಿಗದಿಯಾಗಿದೆ.
ವರದಿಗಳ ಪ್ರಕಾರ ಬೆಂಟ್ಲಿ ಎಸ್‌ಯುವಿ, 2016ನೇ ಸಾಲಿನಲ್ಲಿ ತಲುಪಲಿದೆ. ಈ ಸಂಬಂಧ ಆಕರ್ಷಕ ಟೀಸರ್ ಚಿತ್ರ ಸಹ ಬಿಡುಗಡೆ ಮಾಡಲಾಗಿದೆ. ಕೆಳಗೆ ಕೊಡಲಾಗಿರುವ ಎರಡು ಚಿತ್ರಗಳಿಂದಲೇ ನೂತನ ಬೆಂಟ್ಲಿಯಲ್ಲಿ ತರಲಾಗಿರುವ ಬದಲಾವಣೆಗಳ ಬಗ್ಗೆ ಮೆಲುಕು ಹಾಕಬಹುದಾಗಿದೆ.

2016ರಲ್ಲಿ ಆಗಮನವಾಗಲಿರುವ ಬೆಂಟ್ಲಿ ಎಸ್‌ಯುವಿ ಅತ್ಯಂತ ಶಕ್ತಿಶಾಲಿ ಹಾಗೂ ಅಷ್ಟೇ ಆಡಂಬರ ಸೌಲಭ್ಯಗಳನ್ನು ಹೊಂದಿರಲಿದೆ. ಇದು ಐಷಾರಾಮಿ, ಗುಣಮಟ್ಟತೆ ಹಾಗೂ ನಿರ್ವಹಣೆಯಲ್ಲಿ ಶ್ರೇಷ್ಠತೆಯನ್ನು ಹೊಂದಿರಲಿದೆ.
ಇನ್ನು ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕಸ್ಟಮೈಸ್ಡ್ ಮಾಡುವ ಅವಕಾಶವೂ ಇರಲಿದೆ. ಇದು ಬೆಂಟ್ಲಿ ಕಾರನ್ನು ಇನ್ನಷ್ಟು ದುಬಾರಿಯಾಗಿಸಲಿದೆ. ಅಂತಿಮವಾಗಿ ಬೆಂಟ್ಲಿ ಇಎಕ್ಸ್‌ಪಿ-9 ಎಸ್‌ಯುವಿ 6.0 ಲೀಟರ್ ಡಬ್ಲ್ಯು 12 ಎಂಜಿನ್ ಪಡೆದುಕೊಳ್ಳಲಿದೆ. ವರದಿಗಳ ಪ್ರಕಾರ ಬೆಂಟ್ಲಿಯ ಈ ದುಬಾರಿ ಎಸ್‌ಯುವಿಗಾಗಿ ಈಗಾಗಲೇ 2,000 ಯುನಿಟ್‌ಗಳಷ್ಟು ಬುಕ್ಕಿಂಗ್ ದಾಖಲಾಗಿದೆ.



Click it and Unblock the Notifications








