ಬಿಡುಗಡೆಗೆ ಮುಂಚಿತವಾಗಿ ಬೆಂಟ್ಲಿ ಗ್ರಾಂಡ್ ಕನ್ವರ್ಟಿಬಲ್ ಪ್ರದರ್ಶನ

By Nagaraja

ಈಗಾಗಲೇ ನೀವು ಬೆಂಟ್ಲಿ ಹೆಸರನ್ನು ಕೇಳಿರುವೀರಿ. ಬ್ರಿಟನ್‌ನ ಐಷಾರಾಮಿ ಅಂತೆಯೇ ಐಕಾನಿಕ್ ಕಾರು ತಯಾರಕ ಸಂಸ್ಥೆಗಳಲ್ಲಿ ಇದು ಒಂದಾಗಿದೆ. ಪ್ರಸ್ತುತ ಬೆಂಟ್ಲಿ ಸಂಸ್ಥೆಯು ಗ್ರಾಂಡ್ ಕನ್ವರ್ಟಿಬಲ್ ಮಾದರಿಯನ್ನು ಪ್ರದರ್ಶನಕ್ಕಿರಿಸಿದ್ದು, 2014 ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಅಧಿಕೃತವಾಗಿ ಅನಾವರಣಗೊಳ್ಳಲಿದೆ.

ಎಲ್ಲ ಹಂತದಲ್ಲಿಯೂ ಇದು ಪರಿಪೂರ್ಣ ಬ್ರಿಟಿಷ್ ಕಾರು ಎನಿಸಿಕೊಳ್ಳಲಿದೆ. ಇದನ್ನು ಬೆಂಟ್ಲಿಯ ನುರಿತ ತಜ್ಞರು ಅಭಿವೃದ್ಧಿಗೊಳಿಸಿದ್ದಾರೆ. ಸಂಸ್ಥೆಯ ಪ್ರಕಾರ ಇದು ಈ ವರೆಗೆ ಉತ್ಪಾದನೆಯಾದ ಪೈಕಿ ಅತ್ಯಂತ ಐಷಾರಾಮಿ ಕನ್ವರ್ಟಿಬಲ್ ಮಾದರಿಯಾಗಿರುತ್ತದೆ.


ಹೊಸ ಗ್ರಾಂಡ್ ಕನ್ವರ್ಟಿಬಲ್ ಬೆಂಟ್ಲಿ ಸಾಮರ್ಥ್ಯವನ್ನು ನಿರೂಪಿಸಲಿದೆ. ಹಾಗಿದ್ದರೂ ಸೀಮಿತ ಆವೃತ್ತಿಯಲ್ಲಿ ಮಾತ್ರ ಲಭ್ಯವಿರಲಿದೆ.

ಬೆಂಟ್ಲಿ ಕನ್ವರ್ಟಿಬಲ್ ಹುಡ್ ಕೆಳಗಡೆ 6 3/4 ಲೀಟರ್ ಟ್ವಿನ್ ಟರ್ಬೊ ವಿ8 ಎಂಜಿನ್ ಆಳವಡಿಸಲಾಗುವುದು. ಇದು 530 ಬಿಎಚ್‌ಪಿ (1100 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಆದರೆ ಟ್ರಾನ್ಸ್‌ಮಿಷನ್ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ.

bently

ಎಲೆಕ್ಟ್ರಿಕ್ ಬ್ಲೂ ಬಣ್ಣವನ್ನು ಇದಕ್ಕೆ ಬಳಿಯಲಾಗಿದೆ. ಹಾಗೆಯೇ ಕ್ರೀಮ್ ವೈಟ್ ಲೆಥರ್ ಹೋದಿಕೆಯನ್ನು ಕಾಯ್ದುಕೊಳ್ಳಲಾಗಿದೆ. ಇದರಲ್ಲಿ 14 ವಿಭಿನ್ನ ಲೆಥರ್ ಪರಿಕರಗಳನ್ನು ಬಳಕೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ನವೆಂಬರ್‌ 19ರಂದು ಲಾಸ್ ಏಂಜಲೀಸ್‌ನಲ್ಲಿ ಬೆಂಟ್ಲಿ ಕನ್ವರ್ಟಿಬಲ್ ಅನಾವರಣಗೊಳ್ಳಲಿದೆ. ಇದು ವಿಶ್ವದರ್ಜೆಯ ಗುಣಮಟ್ಟತೆಯೊಂದಿಗೆ ಸಮಕಾಲೀನ ವಿನ್ಯಾಸ ಕಾಪಾಡಿಕೊಳ್ಳಲಿದೆ.

More from DriveSpark

Article Published On: Wednesday, November 19, 2014, 11:40 [IST]
English summary
Bentley unveiled their Grand Convertible, it will be be officially unveiled at the 2014 Los Angeles Auto Show. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+