ಬಿಎಂಡಬ್ಲ್ಯು 2014 ಎಕ್ಸ್5 ಲಾಂಚ್ ಸನ್ನಿಹಿತ
ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆ ಬಿಎಂಡಬ್ಲ್ಯು, ಮೇ 29 ಗುರುವಾರದಂದು ಬಹುನಿರೀಕ್ಷಿತ ಎಕ್ಸ್5 ಕ್ರೀಡಾ ಬಳಕೆಯ ವಾಹನವನ್ನು ಲಾಂಚ್ ಮಾಡಲಿದೆ.
2014 ಎಕ್ಸ್5 ಎಸ್‌ಯುವಿ ಲಾಂಚ್ ಸಂದರ್ಭದಲ್ಲಿ ವಿಶೇಷ ಆತಿಥಿಗಳು ಭಾಗವಹಿಸಲಿದ್ದಾರೆ. ಈಗಾಗಲೇ ಮೂರನೇ ತಲೆಮಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಂಸ್ಥೆ ಆರಂಭಿಸಿದೆ. ಇದರಂತೆ ಆಸಕ್ತ ಗ್ರಾಹಕರು 5 ಲಕ್ಷ ರು. ಮುಗಂಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

2014 ಎಕ್ಸ್5 ಲಾಂಚ್ ಬೆನ್ನಲ್ಲೇ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ. ಇದು ಐದು ಹಾಗೂ ಏಳು ಸೀಟಿನ ಆಸನ ವ್ಯವಸ್ಥೆಯಲ್ಲಿ ಲಭ್ಯವಾಗಲಿದೆ. ಅಂದ ಹಾಗೆ ಬಿಎಂಡಬ್ಲ್ಯು 530ಡಿ ಹಾಗೂ 730 ಡಿ ಆವೃತ್ತಿಯಲ್ಲಿರುವುದಕ್ಕೆ ಸಮಾನವಾದ 3.0 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.
ಹೊಸ ಎಕ್ಸ್5, ಹಿಂದಿನ ಆವೃತ್ತಿಗಿಂತಲೂ ಹೆಚ್ಚು ದೊಡ್ಡದಾದ ಹಾಗೆಯೇ ಹಗುರ ಭಾರವಾಗಿರಲಿದೆ. ಇದು ಹೆಚ್ಚು ಇಂಧನ ಕ್ಷಮತೆ ನೀಡಲು ಶಕ್ತವಾಗಲಿದೆ. ಇದು ಕಂಪ್ಲೀಟ್ ನೌಕ್ಡ್ ಡೌನ್ ಯುನಿಟ್ (ಸಿಕೆಡಿ) ಮುಖಾಂತರ ಆಗಮನವಾಗಲಿದೆ. ಹಾಗೆಯೇ 60ರಿಂದ 70 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.


Click it and Unblock the Notifications








