ಬಿಎಂಡಬ್ಲ್ಯು 7 ಸಿರೀಸ್ ಆಕ್ಟಿವ್ ಹೈಬ್ರಿಡ್ ಜು. 23ರಂದು ಲಾಂಚ್

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಹೊಚ್ಚ ಹೊಸತಾದ ಕಾರೊಂದನ್ನು ದೇಶದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹೌದು, ಮುಂಬರುವ ಜುಲೈ 23ರಂದು ಬಿಎಂಡಬ್ಲ್ಯು 7 ಸಿರೀಸ್ ಆಕ್ಟಿವ್ ಹೈಬ್ರಿಡ್ ಕಾರು ದೇಶದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

ಭವಿಷ್ಯದ ಸಂಚಾರ ವ್ಯವಸ್ಥೆಯ ಭಾಗವಾಗಿ ಹೊಸ ಕಾರು ಭಾರತ ಪ್ರವೇಶ ಪಡೆಯಲಿದೆ. ಈಗಾಗಲೇ 2014 ಆಟೋ ಎಕ್ಸ್ ಪೋದಲ್ಲಿ ಐ8 ಮಾದರಿಯನ್ನು ಪ್ರದರ್ಶಿಸಿರುವ ಬಿಎಂಡಬ್ಲ್ಯು ಪ್ರಸಕ್ತ ಸಾಲಿನಲ್ಲೇ ಈ ಬಹುನಿರೀಕ್ಷಿತ ಕಾರನ್ನು ಲಾಂಚ್ ಮಾಡಲಿದೆ.


ಇದಕ್ಕೂ ಮೊದಲಾಗಿ 7 ಸಿರೀಸ್ ಆಕ್ಟಿವ್‌ಹೈಬ್ರಿಡ್ ಕಾರು ಬಿಡುಗಡೆಯಾಗುತ್ತಿದೆ. ಇದರಲ್ಲಿ ಸಾಂಪ್ರದಾಯಿಕ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಇರಲಿದೆ. ಇದು 3.0 ಲೀಟರ್ ಇನ್‌ಲೈನ್ 6 ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದೆ. ಇದು ಗರಿಷ್ಠ 320 ಅಶ್ವಶಕ್ತಿ (450 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಬಿಎಂಡಬ್ಲ್ಯು ವಿದ್ಯುತ್ ಚಾಲಿತ ಮೋಟಾರು ಹೆಚ್ಚುವರಿ 210 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಇದು ಹೆಚ್ಚುವರಿ 55 ಅಶ್ವಶಕ್ತಿ ಉತ್ಪಾದಿಸಲು ನೆರವಾಗಲಿದೆ. ಹಾಗೆಯೇ ಝಡ್‌ಎಫ್ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

BMW 7 Series activehybrid

ಬಿಎಂಡಬ್ಲ್ಯು 7 ಸಿರೀಸ್ ಆಕ್ಟಿವ್ ಹೈಬ್ರಿಡ್ 5.7 ಸೆಕೆಂಡುಗಳಲ್ಲೇ ಗಂಟೆಗೆ ಗರಿಷ್ಠ 0-100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗ ಪಡೆದುಕೊಳ್ಳಲಿದೆ. ಪ್ರಸ್ತುತ ಕಾರು ತನ್ನ ಗರಿಷ್ಠ ವೇಗ ಮಟ್ಟವನ್ನು (250 ಕೀ.ಮೀ.) ತಲುಪಿದಾಗ ವಿದ್ಯುನ್ಮಾನವಾಗಿ ನಿಯಂತ್ರಣಕ್ಕೊಳಗಾಗಲಿದೆ.

ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಪರಿಚಯವಾಗಲಿರುವ ಬಿಎಂಡಬ್ಲ್ಯು 7 ಸಿರೀಸ್ ಆಕ್ಟಿವ್ ಹೈಬ್ರಿಡ್ ಒಂದು ವರೆ ಕೋಟಿ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

ಅದೇ ರೀತಿ ಭಾರತದಲ್ಲಿದು ಟೊಯೊಟಾ ಕ್ಯಾಮ್ರಿ ಹಾಗೂ ಪ್ರಯಸ್ ಹೈಬ್ರಿಡ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಇದುವರೆಗೆ ಭಾರತದಲ್ಲಿ ಹೈಬ್ರಿಡ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿಲ್ಲದಿದ್ದರೂ ಬಿಎಂಡ್ಲ್ಯು ಹೊಸ ಮಾದರಿ ಉತ್ತಮ ಮಾರಾಟ ಕಂಡುಕೊಳ್ಳುವ ನಿರೀಕ್ಷೆಯಲ್ಲಿದೆ.

More from DriveSpark

Article Published On: Monday, July 7, 2014, 14:32 [IST]
English summary
BMW will be launching its 7-Series ActiveHybrid in India on 23rd July, 2014. The German luxury car manufacturer is taking the initiative of getting alternate fuels and mode of transports possible.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+