ಭಾರತಕ್ಕೂ ಕಾಲಿಟ್ಟ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಭಾರತ ಪ್ರಧಾನಿ ನರೇಂದ್ರ ಮೋದಿ, ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ಎಡಿಷನ್ ತಮ್ಮ ಅಧಿಕೃತ ವಾಹನವಾಗಿ ಸ್ವೀಕರಿಸಿರುವುದರ ಬಗ್ಗೆ ವರದಿ ಮಾಡಿದ್ದೆವು. ಇದರ ಬೆನ್ನಲ್ಲೇ ಜರ್ಮನಿಯ ಈ ಐಷಾರಾಮಿ ವಾಹನ ತಯಾರಕ ಸಂಸ್ಥೆಯು ಈ 760ಎಲ್‌ಐ ಹೈ ಸೆಕ್ಯೂರಿಟಿ ವಾಹನ ಭಾರತ ಮಾರುಕಟ್ಟೆಗೂ ಪರಿಚಯಿಸಿದೆ.

ಬಿಎಂಡಬ್ಲ್ಯು 7 ಸಿರೀಸ್ ಆರ್ಮರ್ಡ್ ಕಾರು, ವೈಯಕ್ತಿಕ ಸಂಚಾರದಂತಹ ಗರಿಷ್ಠ ಭದ್ರತಾ ಮಾನದಂಡಗಳನ್ನು ಪೂರೈಸಲಿದೆ. ಅಲ್ಲದೆ ಅಂತರಾಷ್ಟ್ರೀಯ ಬಿಆರ್‌ವಿ29 ದರ್ಜೆಯ ಗುಂಡೆಸೆಯರಿಮೆ ಭದ್ರತಾ ಮಾನದಂಡಗಳನ್ನು ಇದು ಹೊಂದಿದೆ.

BMW 7 Series

ಒಟ್ಟಿನಲ್ಲಿ ಹೇಳಬೇಕಾದರೆ ಇದು ಅತ್ಯಂತ ಸುರಕ್ಷಿತ ವಾಹನವಾಗಿರಲಿದೆ. ಸಾಮಾನ್ಯ 7 ಸಿರೀಸ್ ಸೆಡಾನ್ ಕಾರಿನ ಸುರಕ್ಷಾ ವೈಶಿಷ್ಟ್ಯಗಳೊಂದಿಗೆ ನೂತನ ಹೈ ಸೆಕ್ಯೂರಿಟಿ ವಾಹನವನ್ನು ಅಭಿವೃದ್ಧಿಪಡಿಸಲಾಗಿದೆ.

ಇಲ್ಲಿ ವಿಶೇಷತೆಯೆಂದರೆ ಹೈ ಸೆಕ್ಯೂರಿಟಿ ಎಡಿಷನ್ ಹಾಗೂ ಸಾಮಾನ್ಯ 7 ಸಿರೀಸ್ ಆವೃತ್ತಿಯನ್ನು ನೋಡಿದಾಗ ಯಾವುದೇ ವ್ಯತ್ಯಾಸ ಗುರುತಿಸಲಾಗುವುದಿಲ್ಲ. ಈ ಮೂಲಕ ರಹಸ್ಯತನವನ್ನು ಕಾಪಾಡಿಕೊಳ್ಳಲಿದೆ. ಅಲ್ಲದೆ ಹೈ ಸೆಕ್ಯೂರಿಟಿ ಎಡಿಷನ್ ಹೆಚ್ಚು ಶಕ್ತಿಶಾಲಿ ಚಾಸೀ ಪಡೆಯಲಿದೆ.

ಹಾಗೆಯೇ ವೈಯಕ್ತೀರಕರಣಗೊಳಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಅಲ್ಲದೆ ಇದರಲ್ಲಿ ತರಲಾಗಿರುವ ಎಲ್ಲ ಕಸ್ಟಮೈಸ್ಡ್ ವ್ಯವಸ್ಥೆಯ ಗೌಪತ್ಯೆಯನ್ನು ಕಾಪಾಡಿಕೊಳ್ಳಲಾಗುವುದು. ಅದೇ ರೀತಿ ಸಂಸ್ಥೆಯ ಸೂಚಿಸಿದ ವರ್ಕ್‌ಶಾಪ್‌ಗಳಲ್ಲಿ ಮಾತ್ರ ಸರ್ವೀಸ್ ಮಾಡಲಾಗುತ್ತಿದ್ದು, ವಿಶೇಷ ತರಬೇತಿ ಪಡೆದ ಚಾಲಕರು ಮಾತ್ರ ಇದಕ್ಕೆ ನೇಮಕಗೊಳಿಸಲಾಗುತ್ತದೆ.

More from DriveSpark

Article Published On: Friday, June 13, 2014, 15:10 [IST]
English summary
The latest version of the BMW 7-Series High Security (760Li High Security) is now available in India. This is the same high security car that's used by the Prime Minister of India, albeit in its standard form.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+