ಚೆನ್ನೈ ಪ್ರವೇಶಿಸಿದ ಬಿಎಂಡಬ್ಲ್ಯು ಎಕ್ಸ್‌ಪೀರಿಯನ್ಸ್ ಟೂರ್ 2014
ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ದೇಶದ 12 ಪ್ರಮುಖ ನಗರಗಳಲ್ಲಿ ತನ್ನ ಜನಪ್ರಿಯ ಎಕ್ಸ್‌ಪೀರಿಯನ್ಸ್ ಟೂರ್ ಹಮ್ಮಿಕೊಳ್ಳುತ್ತಿದೆ. ಇದರಂತೆ 2014 ಬಿಎಂಡಬ್ಲ್ಯು ಎಕ್ಸ್‌ಪೀರಿಯನ್ಸ್ ಟೂರ್ ನೆರೆಯ ಚೆನ್ನೈ ನಗರವನ್ನು ತಲುಪಿದೆ.
ಇದರೊಂದಿಗೆ ಏಳು ನಗರಗಳನ್ನು ಬಿಎಂಡಬ್ಲ್ಯು ಪ್ರವೇಶಿಸಿದಂತಾಗಿದೆ. ಚೆನ್ನೈನಲ್ಲಿ ಬಿಎಂಡಬ್ಲ್ಯು ಎಕ್ಸ್‌ಪೀರಿಯನ್ಸ್ ಟೂರ್ 2014 ಸೆಪ್ಟೆಂಬರ್ 04ರಿಂದ 07ರ ವರೆಗೆ ನಡೆಯಲಿದೆ.

2014 ಬಿಎಂಡಬ್ಲ್ಯು ಎಕ್ಸ್‌ಪೀರಿಯನ್ಸ್ ಟೂರ್ ಚೆನ್ನೈನ ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ರೇಸ್ ಟ್ರ್ಯಾಕ್‌ನಲ್ಲಿ ನಡೆಯಲಿದೆ. ಗ್ರಾಹಕರು ಈ ವೇಳೆಯಲ್ಲಿ ಎಸ್‌ಯುವಿ ಸೇರಿದಂತೆ ಎಲ್ಲ ವಿಭಾಗದ ವಾಹನಗಳ ಅನುಭವ ಪಡೆಯಬಹುದಾಗಿದೆ.
ಚೆನ್ನೈ ನಗರದಲ್ಲಿ ಬಿಎಂಡಬ್ಲ್ಯು ಎಕ್ಸ್‌ಪೀರಿಯನ್ಸ್ ಟೂರ್ ಆಯೋಜನೆಯೊಂದಿಗೆ ಬಾಕಿ ಉಳಿದಿರುವ ಐದು ನಗರಗಳತ್ತ ಸಂಸ್ಥೆ ಹೆಜ್ಜೆಯನ್ನಿಡಲಿದೆ.


Click it and Unblock the Notifications