ಸದ್ಯದಲ್ಲೇ ನಿಮ್ಮ ಕೈಸೇರಲಿದೆ 2014 ಬಿಎಂಡಬ್ಲ್ಯು ಐ8
ಫೆಬ್ರವರಿ ತಿಂಗಳಲ್ಲಿ ರಾಷ್ಟ್ರ ರಾಜಧಾನ ನವದೆಹಲಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ನೂತನ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು ಅನಾವರಣಗೊಳಿಸಲಾಗಿತ್ತು.
ಇದರ ಬೆನ್ನಲ್ಲೇ ಸಿಹಿ ಸುದ್ದಿಯೊಂದು ಬಂದಿದ್ದು, ಈ ಬಹುನಿರೀಕ್ಷಿತ ಕಾರಿನ ವಿತರಣೆ ಕಾರ್ಯವು ಮುಂಬರುವ ಜೂನ್ ತಿಂಗಳಲ್ಲಿ ಆರಂಭವಾಗಲಿದೆ ಎಂದು ಜರ್ಮನಿಯ ಈ ಐಷಾರಾಮಿ ವಾಹನ ತಯಾರಕ ಸಂಸ್ಥೆಯು ತಿಳಿಸಿದೆ.

ಮೊದಲು ಯುರೋಪ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಪ್ರಯಾಣಿಕರಿಗೆ ಗರಿಷ್ಠ ಚಾಲನಾ ಅನುಭವ ಪ್ರದಾನ ಮಾಡಲಿದೆ. ಇಂಧನ ದಕ್ಷತೆಯು ಬಿಎಂಡಬ್ಲ್ಯು ಐ8 ಕಾರಿನ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ಇದು ಪ್ರತಿ 100 ಕೀ.ಮೀ. 2.1 ಲೀಟರ್ ಇಂಧನವನ್ನಷ್ಟೇ ಬಳಕೆ ಮಾಡಲಿದೆ. ಇದಕ್ಕೆ ಪೂರಕವಾಗಿ ಎಲೆಕ್ಟ್ರಿಕ್ ಮೋಟಾರು ಲಗತ್ತಿಸಲಾಗಿದೆ.
ಇದು ಕೇವಲ 4.4 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಲೇಸರ್ ಲೈಟ್ಸ್ ಬಳಕೆ ಮಾಡಲಿದ್ದು, ಎಲ್‌ಇಡಿ ಲೈಟ್‌ಗಿಂತಲೂ ಶೇಕಡಾ 30ರಷ್ಟು ಸಮರ್ಥವಾಗಿರಲಿದೆ.

ಸಾಮಾನ್ಯ ಸ್ಪೋರ್ಟ್ಸ್ ಕಾರಿಗಿಂತಲೂ ಶೇಕಡಾ 50ರಷ್ಟು ಹೆಚ್ಚು ಇಂಧನ ಕ್ಷಮತೆ ನೀಡುವಲ್ಲಿ ಬಿಎಂಡಬ್ಲ್ಯು ಐ8 ಯಶಸ್ವಿಯಾಗಲಿದೆ. ಅಲ್ಲದೆ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.


Click it and Unblock the Notifications








