ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ಕೊಡುಗೆಗಳೇನು?
2014 ಆಟೋ ಎಕ್ಸ್ ಪೋ ಬರಮಾಡಿಕೊಳ್ಳಲು ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ಸಜ್ಜಾಗಿವೆ. ಇದರಂತೆ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಸಹ ಎಲ್ಲ ರೀತಿಯ ಪೂರ್ವ ತಯಾರಿಗಳನ್ನು ನಡೆಸಿಕೊಂಡಿದೆ.
ಅಷ್ಟಕ್ಕೂ ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ತನ್ನ ಯಾವೆಲ್ಲ ಮಾದರಿಗಳನ್ನು ಪರಿಚಯಿಸಲಿದೆ? ಇದು ವಾಹನ ಪ್ರೇಮಿಗಳನ್ನು ಕಾಡುತ್ತಿರುವ ಪ್ರಶ್ನೆ. ಇದಕ್ಕುತ್ತರ ಇಲ್ಲಿದೆ ನೋಡಿ. ಒಂದೇ ವಾಕ್ಯದಲ್ಲಿ ವಿವರಿಸುವುದಾದ್ದಲ್ಲಿ ಬಿಎಂಡಬ್ಲ್ಯು ಐ ಎಂ ಎಕ್ಸ್ ಮಾದರಿಗಳು ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ. ಇನ್ನು ತಿಳಿದಿಲ್ಲವೇ ? ಹೌದು, ಬಿಎಂಡಬ್ಲ್ಯು ಐ8 ಹೈಬ್ರಿಡ್, ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ ಮತ್ತು ಬಿಎಂಡ್ಲ್ಯು ಎಕ್ಸ್5 ಆವೃತ್ತಿಗಳು ಪ್ರದರ್ಶನ ಕಾಣಲಿದೆ.
ನಿಮಗೆ ತಿಳಿದಿರುವಂತೆಯೇ ಈ ಪೈಕಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಈಗಾಗಲೇ ತೀವ್ರ ಕುತೂಹಲ ಸೆಳೆದಿದೆ. ಈ ಮೂಲಕ ದೇಶಕ್ಕೆ ಐ ಬ್ರಾಂಡ್ ಪ್ರದರ್ಶನವಾಗಲಿದೆ. ಇವೆಲ್ಲದರ ಜತೆಗೆ ಎಲ್ಲ ಹೊಸತನದಿಂದ ಕೂಡಿದ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾ ಟರಿಸ್ಮೊ ಸಹ ಇದೇ ಪ್ರಪ್ರಥಮ ಬಾರಿಗೆ ಭಾರತಕ್ಕೆ ಎಂಟ್ರಿ ಕೊಡಲಿದೆ.

ಬಿಎಂಡಬ್ಲ್ಯುನಿಂದ ಆಗಮನವಾಗಲಿರುವ ಇತರ ಮಾದರಿಗಳು
- ಬಿಎಂಡಬ್ಲ್ಯು 1 ಸಿರೀಸ್,
- ಬಿಎಂಡಬ್ಲ್ಯು 3 ಸಿರೀಸ್,
- ಬಿಎಂಡಬ್ಲ್ಯು 5 ಸಿರೀಸ್,
- ಬಿಎಂಡಬ್ಲ್ಯು ಎಕ್ಸ್1,
- ಬಿಎಂಡಬ್ಲ್ಯು ಎಕ್ಸ್3,
- ಬಿಎಂಡಬ್ಲ್ಯು ಝಡ್4 ಮತ್ತು
- ಬಿಎಂಡಬ್ಲ್ಯು 7 ಸಿರೀಸ್



Click it and Unblock the Notifications








