ದಿನಕ್ಕೆ ಬರಿ 555 ರು. ಪಾವತಿಸಿ ಬಿಎಂಡಬ್ಲ್ಯು ಕಾರು ನಿಮ್ಮದಾಗಿಸಿ
ಜೀವನದಲ್ಲಿ ಒಂದಲ್ಲ ಒಂದು ದಿನ ಐಷಾರಾಮಿ ಕಾರೊಂದನ್ನು ಕೊಂಡುಕೊಳ್ಳಬೇಕೆಂಬ ಕನಸನ್ನು ಕಟ್ಟಿಕೊಂಡಿರುವೀರಾ? ನಿಮ್ಮ ಕನಸು ಇಗೊ ನನಸಾಗುವ ಕಾಲ ಹತ್ತಿರ ಬಂದಿದೆ.
ಮಧ್ಯದ ವರ್ಗದ ಜನರ ಪಾಲಿಗೆ ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಗಳಾದ ಬಿಎಂಡಬ್ಲ್ಯು, ಆಡಿ ಮತ್ತು ಮರ್ಸಿಡಿಸ್ ಬೆಂಝ್‌ಗಳಂತಹ ಕಾರನ್ನು ಖರೀದಿಸುವುದೆಂದರೆ ಕನಸಿನ ಮಾತು. ಅಷ್ಟೇ ಯಾಕೆ ಇದು ತನ್ನ ಕೈಯನ್ನು ತಾನೇ ಸುಟ್ಟುಕೊಂಡಂತೆ!

ಐಷಾರಾಮಿ ಕಾರುಗಳು ಅಷ್ಟೊಂದು ದುಬಾರಿಯೇ ? ಇಲ್ಲ ಈಗ ಕಾಲ ಬದಲಾಗಿದೆ. ಜರ್ಮನಿಯ ಐಷಾರಾಮಿ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ತನ್ನ ಜನಪ್ರಿಯ 1 ಸಿರೀಸ್ ಮಾದರಿಗೆ ವಿನೂತನ ಆಫರ್ ಒದಗಿಸುತ್ತಿದೆ.
ಇದರಂತೆ ಗ್ರಾಹಕರು ಪ್ರತಿ ದಿನಕ್ಕೆ 555 ರು. ಮಾತ್ರ ಪಾವತಿಸಿದರೆ ಸಾಕು. ಆಕರ್ಷಕ 1 ಸಿರೀಸ್ ಕಾರು ನಿಮ್ಮ ಕೈ ಬಂದು ಸೇರಲಿದೆ. ಪ್ರಸ್ತುತ ಆಫರ್ ಸೀಮಿತ ಅವಧಿಯ ವರೆಗೆ ಮಾತ್ರ ಲಭ್ಯವಿರಲಿದೆ.

ಬಿಎಂಡಬ್ಲ್ಯು ಹಣಕಾಸು ಸೇವೆಯ ಪ್ರಕಾರ 1 ಸಿರೀಸ್ ಕಾರು ಖರೀದಿಸುವ ಗ್ರಾಹಕರು ಪ್ರಾರಂಭದಲ್ಲಿ 8ರಿಂದ 10 ಲಕ್ಷ ರು.ಗಳ ವರೆಗೆ ಡೌನ್ ಪೇಮೆಂಟ್ ಕಟ್ಟಬೇಕಾಗಿದೆ. ಬಳಿಕ ಏಳು ವರ್ಷಗಳ ಇಎಂಐ ಯೋಜನೆ ಪ್ರಕಾರ ವರ್ಷದ ಮೊದಲ 11 ತಿಂಗಳು ದಿನಕ್ಕೆ 555 ರುಪಾಯಿ ಅಂತೆಯೇ 12ನೇ ತಿಂಗಳಿನಲ್ಲಿ 1.5 ಲಕ್ಷ ರು. ಪಾವತಿಸಬೇಕಾಗಿದೆ.
ಮೂರು ಡೀಸೆಲ್ ಹಾಗೂ ಒಂದು ಪೆಟ್ರೋಲ್ ವೆರಿಯಂಟ್‌ನಲ್ಲಿ ಬಿಎಂಡಬ್ಲ್ಯು 1 ಸಿರೀಸ್ ಲಭ್ಯವಿದೆ. ಇದರ 1.6 ಲೀಟರ್ 4 ಲೀಟರ್ ಪೆಟ್ರೋಲ್ ಎಂಜಿನ್ 136 (220 ಎನ್‌ಎಂ) ಅಶ್ವಶಕ್ತಿ ಉತ್ಪಾದಿಸುತ್ತದೆ. ಇನ್ನೊಂದೆಡೆ 2.0 ಲೀಟರ್ ಡೀಸೆಲ್ ಎಂಜಿನ್ ಗರಿಷ್ಠ 143 ಅಶ್ವಶಕ್ತಿ (320 ಎನ್‌ಎಂ) ಉತ್ಪಾದಿಸಲಿದೆ.
ಅಂದ ಹಾಗೆ ಬಿಎಂಡಬ್ಲ್ಯು 1 ಸಿರೀಸ್ 22.6 ಲಕ್ಷ ರು.ಗಳಿಂದ 32.5 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಿದೆ. ಒಟ್ಟಿನಲ್ಲಿ ಈ ಎಂಟ್ರಿ ಲೆವೆಲ್ ಐಷಾರಾಮಿ ಕಾರಿನ ಮಾರಾಟ ಉತ್ತೇಜನಕ್ಕೆ ಬಿಎಂಡಬ್ಲ್ಯು ವಿನೂತನ ಯೋಜನೆ ಹಮ್ಮಿಕೊಂಡಿದೆ.


Click it and Unblock the Notifications








