ಪ್ರಸಕ್ತ ಸಾಲಿನಲ್ಲೇ ಬಿಎಂಡಬ್ಲ್ಯುನಿಂದ ಇನ್ನಷ್ಟು ಕೊಡುಗೆಗಳನ್ನು ನಿರೀಕ್ಷಿಸಿ
ಕಳೆದ ದಿನವಷ್ಟೇ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ನೂತನ ಎಕ್ಸ್5 ಎಸ್‌ಯುವಿ ಕಾರನ್ನು ದೇಶದ ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. ಇಲ್ಲಿಗೆ ಬಿಎಂಡಬ್ಲ್ಯು ಓಟ ಕೊನೆಗೊಳ್ಳುವುದಿಲ್ಲ.
ಪ್ರಸಕ್ತ ಸಾಲಿನಲ್ಲಿ ಇನ್ನು ಕೆಲವೊಂದು ಮಹತ್ವದ ಮಾದರಿಗಳನ್ನು ಪರಿಚಯಿಸುವ ಇರಾದೆಯನ್ನು ಜರ್ಮನಿಯ ಈ ಐಷಾರಾಮಿ ವಾಹನ ತಯಾರಕ ಸಂಸ್ಥೆ ಹೊಂದಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷರಾಗಿರುವ ಪಿಲಿಪ್ ವೋನ್ ಸಹ್ರ್ 2014ರಲ್ಲಿ ದೇಶದ ಗ್ರಾಹಕರಿಗೆ ಇನ್ನಷ್ಟು ಅಚ್ಚರಿ ಕಾದಿದೆ ಎಂದಿದ್ದಾರೆ.

ಈಗಾಗಗೇ 2014 ಎಕ್ಸ್5 ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡಿರುವ ಬಿಎಂಡಬ್ಲ್ಯು, ಎಂ ಸಿರೀಸ್ ಕಾರುಗಳಿಗೂ (ಎಂ3 ಹಾಗೂ ಎಂ4) ಇದೇ ನೀತಿ ಅನುಸರಿಸುವ ಸಾಧ್ಯತೆಗಳಿವೆ. ಅದೇ ರೀತಿ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಬಹುನಿರೀಕ್ಷಿತ ಐ8 ಹೈಬ್ರಿಡ್ ಕಾರು ಸಹ ಬಿಎಂಡಬ್ಲ್ಯು ಪಟ್ಟಿಯಲ್ಲಿದೆ.
ಮಿನಿ ಇಂಡಿಯಾ ಅಧೀನತೆಯನ್ನು ಹೊಂದಿರುವ ಬಿಎಂಡಬ್ಲ್ಯು ಈ ಉಪಖಂಡಕ್ಕೆ ಪ್ರಸಕ್ತ ವರ್ಷಾಂತ್ಯದೊಳಗೆ ಈಗಿನ ಜನರೇಷನ್ ಕಾರನ್ನು ಪರಿಚಯಿಸುವ ಸಾಧ್ಯತೆಯಿದೆ. ಇದು 2.0 ಲೀಟರ್ ಪೆಟ್ರೋಲ್ ನಿಯಂತ್ರಿತ ಫೋರ್ ಸಿಲಿಂಡರ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ 1.5 ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲೂ ಲಭ್ಯವಿರಲಿದೆ. ಒಟ್ಟಾರೆಯಾಗಿ ನ್ಯೂ ಜನರೇಷನ್ ಮಿನಿ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಇನ್ನೊಂದೆಡೆ ಬಿಎಂಡಬ್ಲ್ಯು ಪ್ಲನ್ ಇನ್ ವರ್ಷನ್ ಮಾದರಿಯನ್ನು ದೇಶದಲ್ಲಿ ಪ್ರತಿಷ್ಠಿತ 2014 ಆಟೋ ಎಕ್ಸ್ ಪೋದಲ್ಲಿ ಸಚಿನ್ ತೆಂಡೂಲ್ಕರ್ ಅನಾವರಣಗೊಳಿಸಿದ್ದರು. ಇದು ಟ್ವಿನ್ ಟರ್ಬೊಚಾರ್ಜಿಂಗ್ ಜತೆ 1.5 ಲೀಟರ್ ಪೆಟ್ರೋಲ್ ನಿಯಂತ್ರಿತ ತ್ರಿ ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದೆ. ಇದು 231 ಅಶ್ವಶಕ್ತಿ (320 ಎನ್ಎಂ ಟಾರ್ಕ್) ಉತ್ಪಾದಿಸಲಿದೆ.
ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರು ಹೆಚ್ಚುವರಿ 131 ಅಶ್ವಶಕ್ತಿ (250 ಎನ್‌ಎಂ ಪೀಕ್ ಟಾರ್ಕ್) ಉತ್ಪಾದಿಸಲು ನೆರವಾಗಲಿದೆ. ಈ ಹೈಬ್ರಿಡ್ ಸ್ಪೋರ್ಟ್ಸ್ ಕಾರು ಕೇವಲ 4.5 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ಅಂತೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಹಾಗೆಯೇ ಬಿಎಂಡಬ್ಲ್ಯು ಎಂ ಸಿರೀಸ್ ಕಾರುಗಳು, ಬಿಎಂಡಬ್ಲ್ಯು ಶಕ್ತಿಶಾಲಿ ಎಎಂಜಿ ನಿಯಂತ್ರಿತ ವಾಹನಗಳಿಗೆ ಸ್ಪಷ್ಟ ಉತ್ತರವಾಗಿರಲಿದೆ. ಎಂ3 ಆವೃತ್ತಿಯು 3.0 ಲೀಟರ್, ಇನ್ ಲೈನ್ ಸಿಕ್ಸ್ ಎಂ ಟ್ವಿನ್ ಟರ್ಬೊ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 425 ಅಶ್ವಶಕ್ತಿ (550 ಎನ್ಎಂ ಟಾರ್ಕ್) ಉತ್ಪಾದಿಸಲಿದೆ. ಇದು 6 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ. ಹಾಗೆಯೇ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ದೇಶದ ರಸ್ತೆ ಪ್ರವೇಶವಾಗಲಿದೆ.


Click it and Unblock the Notifications








