2015ರಲ್ಲಿ ಬಿಎಂಡಬ್ಲ್ಯು ಎಂ2 ಕೂಪೆ ಜಾಗತಿಕ ಬಿಡುಗಡೆ
ಜಾಗತಿಕ ಮಾರುಕಟ್ಟೆಗೆ ಅನೇಕ ಮನೋಹರ ಮಾದರಿಗಳ ಕೊಡುಗೆ ನೀಡಿರುವ ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಮುಂದಿನ ವರ್ಷ ಎಂ2 ಕೂಪೆ ಕಾರನ್ನು ಬಿಡುಗಡೆ ಮಾಡಲಿದೆ.
ಹೊಸ ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ಕೂಪೆ ಎಂ2 ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಜಾಗತಿಕ ಲಾಂಚ್ 2015ರಲ್ಲಿ ಕಂಡುಬರಲಿದೆ.

ನಿಮ್ಮ ಮಾಹಿತಿಗಾಗಿ ಬಿಎಂಡಬ್ಲ್ಯು ಎಂ3 ಹಾಗೂ ಎಂ4 ಮಾದರಿಗಳ ಬಿಡುಗಡೆ ಇದೇ ಮುಂಬರುವ 2014 ನವೆಂಬರ್ 26ರಂದು ನಡೆಯಲಿದೆ.
ಎಂ2 ಕೂಪೆ ಕಾರಿನಲ್ಲಿ 3.0 ಲೀಟರ್ ಸಿಕ್ಸ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಇರಲಿದೆ. ಅಷ್ಟೇ ಅಲ್ಲದೆ ಜರ್ಮನಿಯ ಎಂಜಿನಿಯರ್‌ಗಳು ಇದರಲ್ಲಿ ಎಂ ಟ್ವಿನ್ ಟರ್ಬೊ ಸಿಸ್ಟಂ ಎಂಜಿನ್ ಆಳವಡಿಸಲಿದ್ದು, ಗರಿಷ್ಠ 400 ಅಶ್ವಶಕ್ತಿ ಉತ್ಪಾದಿಸಲಿದೆ.

ಎರಡು ಗೇರ್ ಬಾಕ್ಸ್ ಆಯ್ಕೆಯಲ್ಲಿ ಎಂ2 ಕೂಪೆ ಆಗಮನವಾಗಲಿದೆ. ಈ ಪೈಕಿ ಮೊದಲನೆಯದ್ದು ಪೆಡಲ್ ಶಿಫ್ಟರ್ ಜೊತೆಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಆಗಿರಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಇರಲಿದೆ.

2015 ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲೂ ಪ್ರದರ್ಶನ ಕಾಣಲಿರುವ ಎಂ2 ಕೂಪೆ ಕಾರು ಪ್ರಸ್ತುತ ಮಾರಾಟದಲ್ಲಿರುವ 1ಎಂ ಕೂಪೆ ಕಾರುಗಳಿಗೆ ಬದಲಿ ವ್ಯವಸ್ಥೆಯಾಗಿರಲಿದೆ. ಇಷ್ಟೆಲ್ಲ ಆದರೂ ಭಾರತ ಮಾರುಕಟ್ಟೆಯನ್ನು ಎಂ2 ಕೂಪೆ ಯಾವಾಗ ತಲುಪಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.


Click it and Unblock the Notifications