ಬಿಎಂಡಬ್ಲ್ಯು ಎಂ5 30ನೇ ವರ್ಷಾಚರಣೆ; ಜಾಹ್ರೆ ಎಡಿಷನ್ ಲಾಂಚ್

ಐಕಾನಿಕ್ ಎಂ5 ಮಾದರಿಯ 30ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಜರ್ಮನಿಯ ಮೂಲದ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ನೂತನ ಜಾಹ್ರೆ ಸೀಮಿತ ಆವೃತ್ತಿಯನ್ನು ಲಾಂಚ್ ಮಾಡಿದೆ.

ಈ ವಿಶೇಷ ಸೆಡಾನ್ ಕಾರಿನ 300 ಯುನಿಟ್‌ಗಳನ್ನಷ್ಟೇ ನಿರ್ಮಾಣ ಮಾಡಲಾಗುವುದು ಎಂದು ಬಿಎಂಡಬ್ಲ್ಯು ಪ್ರಕಟಣೆಯಲ್ಲಿ ತಿಳಿಸಿದೆ. ನೂತನ ಬಿಎಂಡಬ್ಲ್ಯು ಎಂ5 30 ಜಾಹ್ರಿ ಎಡಿಷನ್, 4.4 ಲೀಟರ್, ಎಂ ಟ್ವಿನ್ ಪವರ್ ಟರ್ಬೊ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 600 ಅಶ್ವಶಕ್ತಿ (700ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಕೇವಲ 3.9 ಸೆಕೆಂಡುಗಳಲ್ಲೇ ಗಂಟೆಗೆ 0-62 ಮೈಲ್ ಹಾಗೆಯೇ ಗಂಟೆಗೆ ಗರಿಷ್ಠ 199 ಮೈಲ್ ವೇಗದಲ್ಲಿ ಸಂಚರಿಸಲಿದೆ.

ಬಿಎಂಡಬ್ಲ್ಯು ಎಂ5 30ನೇ ವರ್ಷಾಚರಣೆ; ಜಾಹ್ರೆ ಎಡಿಷನ್ ಲಾಂಚ್

ನೂತನ ಬಿಎಡಬ್ಲ್ಯು ಜಾಹ್ರೆ ಎಡಿಷನ್, ಫ್ರಾಜನ್ ಡಾರ್ಕ್ ಸಿಲ್ವರ್ ಪೈಂಟ್ ಜತೆಗೆ ಡಾರ್ಕ್ ಕ್ರೋಮ್ ಹೈಲೈಟ್ ಪಡೆದುಕೊಳ್ಳಲಿದೆ. ಕಾರಿನ ಒಳಮೈ ಸಹ ಬ್ಲ್ಯಾಕ್ ಆಗಿರಲಿದ್ದು, ಪ್ರೀಮಿಯಂ ಮೆರಿನೊ ಲೆಥರ್ ಪಡೆದುಕೊಳ್ಳಲಿದೆ. ಹಾಗೆಯೇ ಕಾರಿನ ಸುತ್ತಲೂ ಸ್ಪೆಷಲ್ ಬ್ಯಾಡ್ಜಿಂಗ್ ಇರಲಿದೆ.

ಬಿಎಂಡಬ್ಲ್ಯು ಎಂ5 30ನೇ ವರ್ಷಾಚರಣೆ; ಜಾಹ್ರೆ ಎಡಿಷನ್ ಲಾಂಚ್

ಬಿಎಂಡಬ್ಲ್ಯು ತನ್ನ ಮೊತ್ತ ಮೊದಲ ಎಂ5 ಮಾದರಿಯನ್ನು 1984ನೇ ಇಸವಿಯಲ್ಲಿ ಅಭಿವೃದ್ಧಿಪಡಿಸಿತ್ತು. ಇದೀಗ ಜಾಹ್ರೆ ಮುಖಾಂತರ 30ನೇ ವರ್ಷಾಚರಣೆಯನ್ನು ಆಚರಿಸುತ್ತಿದೆ.

ಬಿಎಂಡಬ್ಲ್ಯು ಎಂ5 30ನೇ ವರ್ಷಾಚರಣೆ; ಜಾಹ್ರೆ ಎಡಿಷನ್ ಲಾಂಚ್

ವಿಶೇಷ ರೀತಿಯ ಬಣ್ಣದ ಆಯ್ಕೆಯನ್ನು ಹೊಂದಿರುವ ಬಿಎಂಡಬ್ಲ್ಯು ಎಂ5 30 ಎಡಿಷನ್ ಸೀಮಿತ 300 ಯುನಿಟ್‌ಗಳಷ್ಟೇ ಉತ್ಪಾದನೆಯಾಗಲಿದೆ.

ಬಿಎಂಡಬ್ಲ್ಯು ಎಂ5 30ನೇ ವರ್ಷಾಚರಣೆ; ಜಾಹ್ರೆ ಎಡಿಷನ್ ಲಾಂಚ್

ಇದರ ಜತೆಗೆ 7 ಸ್ಪೋಕ್ 19 ಇಂಚಿನ ಬೈ ಕಲರ್ ಎಂ ಲೈಟ್ ಅಲಾಯ್ ವೀಲ್ ಪಡೆದುಕೊಳ್ಳಲಿದೆ.

ಬಿಎಂಡಬ್ಲ್ಯು ಎಂ5 30ನೇ ವರ್ಷಾಚರಣೆ; ಜಾಹ್ರೆ ಎಡಿಷನ್ ಲಾಂಚ್

ಒಟ್ಟಿನಲ್ಲಿ ಬಿಎಂಡಬ್ಲ್ಯು ಎಂ5 ಪ್ರತಿಷ್ಠೆಯಲ್ಲಿ ಎತ್ತಿ ಹಿಡಿಯುವಲ್ಲಿ ನೂತನ ಜಾಹ್ರೆ ಎಡಿಷನ್‌ಗೆ ಸಾಧ್ಯವಾಗಲಿದೆ.

More from DriveSpark

Article Published On: Saturday, May 10, 2014, 15:31 [IST]
English summary
BMW will be celebrating the 30th anniversary of their M5 with a special edition called the Jahre Edition. The German car manufacturer will be producing only 300 units of the special edition saloon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+