ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ ಭಾರತದಲ್ಲಿ ಲಾಂಚ್
ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಎಂ ಗ್ರ್ಯಾನ್ ಕೂಪೆ ಕಾರನ್ನು ಭಾರತದಲ್ಲಿ (ಎಪ್ರಿಲ್ 03, ಗುರುವಾರ) ಲಾಂಚ್ ಮಾಡಿದೆ.
ದರ ಮಾಹಿತಿ: 1,75,40,000 ರು. (ಎಕ್ಸ್ ಶೋ ರೂಂ ದೆಹಲಿ)

ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಬಿಎಂಡಬ್ಲ್ಯು ಎಂ ಗ್ರ್ಯಾನ್ ಕೂಪೆ ಭಾರತ ಪ್ರವೇಶಿಸಲಿದೆ. ಈ ನಾಲ್ಕು ಬಾಗಿಲುಗಳು ಕೂಪೆ, ಸ್ಪೋರ್ಟಿ ಎಂಜಿನ್ ಪಡೆದುಕೊಳ್ಳಲಿದೆ.
ಇದರಲ್ಲಿ 4.4 ಲೀಟರ್ ವಿ8 ಎಂಜಿನ್ ಜತೆಗೆ ಎಂ ಟ್ವಿನ್ ಪವರ್ ಟರ್ಬೊ ಎಂಜಿನ್ ಆಳವಡಿಸಲಾಗಿದೆ. ಇದು 560 ಅಶ್ವಶಕ್ತಿ (680 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಪ್ರಸ್ತುತ ಕಾರು ಗಂಟೆಗೆ ಗರಿಷ್ಠ 250 ಕೀ.ಮೀ. ಹಾಗೆಯೇ ಕೇವಲ 4.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಾಗಲಿದೆ.
ಹಲವು ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿರುವ ಬಿಎಂಡಬ್ಲ್ಯು ಎಂ ಗ್ರ್ಯಾನ್ ಕೂಪೆ ಕಾರಿನಲ್ಲಿ ಹಗುರ ಭಾರದ ಪರಕರಗಳನ್ನು ಬಳಕೆ ಮಾಡಲಾಗಿದ್ದು, ಭಾರ ಕಡಿತಗೊಳಿಸುವಲ್ಲಿ ನೆರವಾಗಿದೆ.
ಮಿಸ್ ಮಾಡದಿರಿ: ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications