ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಬಿಎಂಡಬ್ಲ್ಯು ಎಂ2 ಎಂಟ್ರಿ
ಜರ್ಮನಿಯ ಲಗ್ಷುರಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯುನಿಂದ ನಿರ್ಮಿತ ಗರಿಷ್ಠ ನಿರ್ವಹಣೆಯ ವಾಹನಗಳು ವಿಶೇಷವಾದ 'ಎಂ' ಬ್ಯಾಡ್ಜ್‌ನಿಂದ ಗುರುತಿಸಿಸಲ್ಪಡುತ್ತದೆ.
ಇದರಂತೆ ಜರ್ಮನಿಯ ಈ ಐಷಾರಾಮಿ ಸಂಸ್ಥೆಯು ಮುಂದಿನ ವರ್ಷ ನಡೆಯಲಿರುವ 2015 ಫ್ರಾಂಕ್‌ಫರ್ಟ್ ಮೋಟಾರು ಶೋದಲ್ಲಿ ಎಂ2 ಗರಿಷ್ಠ ನಿರ್ವಹಣೆಯ ಕಾರನ್ನು ಅನಾವರಣಗೊಳಿಸುವ ಸಿದ್ಧತೆಯಲ್ಲಿ ತೊಡಲಿದೆ.

ಆದರೆ ಗ್ರಾಹಕರು ಮಾತ್ರ ಈ ಬಹುನಿರೀಕ್ಷಿತ ಕಾರಿಗಾಗಿ ಇನ್ನು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. 2016ರ ವೇಳೆಯಷ್ಟೇ ಇದು ಗ್ರಾಹಕರನ್ನು ತಲುಪಲಿದೆ.
ಹೊಸತಾದ ಆಗಮನವಾಗಲಿರುವ ಎಂ2 ವಾಹನ ಎಂ135ಐ ಮತ್ತು ಎಂ235ಐ ಮಾದರಿಯಲ್ಲಿರುವುದಕ್ಕೆ ಸಮಾನವಾದ 3.0 ಲೀಟರ್ ಟರ್ಬೊ ಚಾರ್ಚ್ಡ್ ಎಂಜಿನ್ ಪೆಡದುಕೊಳ್ಳಲಿದೆ. ಇದು 364.7 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಂಡುಬರಲಿದೆ. ಹಾಗೆಯೇ ಆಲ್ ವೀಲ್ ಡ್ರೈವ್ ಸಹ ಇರುವ ನಿರೀಕ್ಷೆಯಿದೆ.

ಹಾಗಿದ್ದರೂ ಈ ಬಹುನಿರೀಕ್ಷಿತ ಕಾರು ಭಾರತ ಮಾರುಕಟ್ಟೆ ಪ್ರವೇಶ ಪಡೆಯಲಿದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ. ಏತನ್ಮಧ್ಯೆ ಬಿಎಂಡಬ್ಲ್ಯು ಎಂ4 ಮತ್ತು ಎಂ6 ಗಾಡಿಗಳು ಭಾರತ ಮಾರುಕಟ್ಟೆಯನ್ನು ಮುಂಬರುವ ನವೆಬಂರ್ 26ರಂದು ತಲುಪಲಿದೆ.


Click it and Unblock the Notifications