ಮಾಸಾಂತ್ಯದಲ್ಲಿ ಬಿಎಂಡಬ್ಲ್ಯು ಎಕ್ಸ್3 ಪರಿಷ್ಕೃತ ಆವೃತ್ತಿ ಬಿಡುಗಡೆ
ಜರ್ಮನಿಯ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಸದ್ಯದಲ್ಲೇ ಮಗದೊಂದು ಆಕರ್ಷಕ ಮಾದರಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಿದೆ.
ಇದೀಗಷ್ಟೇ 7 ಸಿರೀಸ್ ಆಕ್ಟಿವ್ ಹೈಬ್ರಿಡ್ ಸಿಗ್ನೇಚರ್ ಎಡಿಷನ್ ಪರಿಚಯಿಸಿರುವ ಈ ದುಬಾರಿ ಕಾರು ತಯಾರಕ ಸಂಸ್ಥೆಯು ಮಗದೊಂದು ಆಕರ್ಷಕ ಪರಿಷ್ಕೃತ ಎಕ್ಸ್3 ಮಾದರಿಯನ್ನು ಮುಂಬರುವ ಆಗಸ್ಟ್ 28ರಂದು ಪರಿಚಯಿಸಲಿದೆ.

2014 ಜಿನೆವಾ ಮೋಟಾರು ಶೋದಲ್ಲಿ ಎಕ್ಸ್3 ಮಾದರಿಯನ್ನು ಪ್ರದರ್ಶಿಸಿದ್ದ ಬಿಎಂಡಬ್ಲ್ಯು, ಪ್ರಮುಖವಾಗಿಯೂ ಹೊರಂಗಣ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆ ತರಲಿದೆ. ಇದರ ಬಂಪರ್ ಹಾಗೂ ಸಿಗ್ನೇಚರ್ ಗ್ರಿಲ್ ಪರಿಷ್ಕೃತಗೊಳಿಸಲಾಗಿದೆ.
ಹೊಸತಾದ ಟೈಲ್ ಲ್ಯಾಂಪ್, ಹೆಡ್ ಲೈಟ್ ಮತ್ತು ಅಲಾಯ್ ವೀಲ್‌ಗಳು ಈ ಎಸ್‌ಯುವಿ ಕಾರಿಗೆ ಹೆಚ್ಚಿನ ಆಕರ್ಷಕ ಲುಕ್ ಪ್ರದಾನ ಮಾಡಲಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದು 2.0 ಹಾಗೂ 3.0 ಲೀಟರ್ ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಅಂತೆಯೇ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರಲಿದೆ.
ಇನ್ನು ಕಾರಿನೊಳಗೆ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗುತ್ತಿಲ್ಲ. ಹಾಗಿದ್ದರೂ ಕೆಲವೊಂದು ಮಾರ್ಪಾಡುಗಳು ಕಂಡುಬರಲಿದೆ. ಇದು 40ರಿಂದ 50 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ) ದುಬಾರಿಯಾಗಲಿದೆ.


Click it and Unblock the Notifications








