ಬಿಎಂಡಬ್ಲ್ಯು, ಟೊಯೊಟಾದಿಂದ ಜಂಟಿ ಕ್ರೀಡಾ ಕಾರು ಅಭಿವೃದ್ಧಿ
ಜಾಗತಿಕ ವಾಹನೋದ್ಯಮದಲ್ಲಿ ಜರ್ಮನಿ ಹಾಗೂ ಜಪಾನ್ ದೇಶಗಳಿಗೆ ಅತ್ಯಂತ ಹೆಚ್ಚು ಬೇಡಿಕೆಯಿದೆ. ಈ ಎರಡು ದೇಶಗಳ ತಂತ್ರಗಾರಿಕೆಯನ್ನು ಹಿಮ್ಮೆಟ್ಟಿಸುವುದು ಅಷ್ಟು ಸುಲಭದ ಮಾತ್ರವಲ್ಲ.
ಪ್ರಸಕ್ತ ಜಗತ್ತಿನ ಆಟೋ ವಲಯದ ಎರಡು ಪ್ರಖ್ಯಾತ ಸಂಸ್ಥೆಗಳು ಕೈಜೋಡಿಸಲಿದೆ. ಹೌದು, ಜರ್ಮನಿಯ ಬಿಎಂಡಬ್ಲ್ಯು ಹಾಗೂ ಜಪಾನ್‌ನ ಆಟೋ ದೈತ್ಯ ಟೊಯೊಟಾ ನೂತನ ಕ್ರೀಡಾ ಕಾರು ಫ್ಲಾಟ್‌ಫಾರ್ಮ್ ಅಭಿವೃದ್ಧಿಗಾಗಿ ಜಂಟಿಯಾಗಿ ಕಾರ್ಯಾಚರಿಸಲಿದೆ.

ಈ ಹಿಂದೆಯೇ ಮಿಡ್ ಸೈಜ್ ಸ್ಪೋರ್ಟ್ಸ್ ವಾಹನ ಉತ್ಪಾದನೆ ಬಗ್ಗೆ ಮಾಹಿತಿಗಳು ಬಂದಿದ್ದವು. ಪ್ರಸ್ತುತ ವರದಿ ಇದನ್ನು ಪುಷ್ಠಿಕರಿಸುತ್ತಿದ್ದು, ಹಗರುಭಾರದ ತಂತ್ರಜ್ಞಾನ ಮತ್ತು ಲಿಥಿಯಂ ಇಯಾನ್ ಬ್ಯಾಟರಿ ನಿರ್ಮಾಣ ಒಳಗೊಂಡಿರಲಿದೆ.
ಅಂದ ಹಾಗೆ ಬಿಎಂಡಬ್ಲ್ಯು ಸ್ಪೋರ್ಟ್ಸ್ ಕಾರುಗಳು ಈಗಾಗಲೇ ಎಂ ಸಿರೀಸ್‌ನಲ್ಲಿ ಗುರುತಿಸಿಕೊಂಡಿದೆ. ಇದರಲ್ಲಿ ಸೆಡಾನ್, ಕೂಪೆ, ಕನ್ವರ್ಟಿಬಲ್ ಮತ್ತು ಎಸ್‌ಯುವಿಗಳು ಸೇರಿದೆ. ಇನ್ನೊಂದೆದೆ ಜಿಟಿ86 ಮಾದರಿಯನ್ನು ಟೊಯೊಟಾ ಅಭಿವೃದ್ಧಿಪಡಿಸಿದೆ. ಹಾಗೆಯೇ ಗ್ರಾಂಡ್ ಟೂರರ್ ಮತ್ತು ಸ್ಪೋರ್ಟ್ಸ್ ಕೂಪೆ ಲಭ್ಯವಿದೆ. ಇದನ್ನು ಟೊಯೊಟಾ ಮತ್ತು ಸುಬರು ಜಂಟಿಯಾಗಿ ಅಭಿವೃದ್ಧಿಪಡಿಸಿದೆ.


Click it and Unblock the Notifications








