ಬಿಎಂಡಬ್ಲ್ಯು ಎಕ್ಸ್4 ಸ್ಪೋರ್ಟ್ ಕ್ರಾಸೋವರ್ ಬಿಡುಗಡೆ ಖಚಿತ
ಅಂತೂ ಇಂತೂ ಕೊನೆಗೂ ಬಹುನಿರೀಕ್ಷಿತ ಬಿಎಂಡಬ್ಲ್ಯು ಸ್ಪೋರ್ಟ್ ಕ್ರಾಸೋವರ್ ಆಗಮನವಾಗುತ್ತಿದೆ. ಹೌದು, ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಮಾರ್ಚ್ 6ರಂದು ನಿರ್ಮಾಣ ಸಿದ್ಧ 'ಎಕ್ಸ್4' ವರ್ಷನ್ ಅನ್ನು ಪರಿಚಯಿಸಲಿದೆ.
ಪ್ರಸ್ತುತ ಕಾರು ವರ್ಷಾಂತ್ಯದಲ್ಲಿ ಮಾರಾಟಕ್ಕೆ ಲಬ್ಯವಾಗಲಿದೆ. ಈ ಬಗ್ಗೆ ಟೀಸರ್ ವೀಡಿಯೋವೊಂದನ್ನು ಬಿಎಂಡಬ್ಲ್ಯು ಬಿಡುಗಡೆ ಮಾಡಿದೆ. ನಿಮ್ಮ ಮಾಹಿತಿಗಾಗಿ, ಎಕ್ಸ್3 ತಲಹದಿಯಲ್ಲಿ ನೂತನ ಎಕ್ಸ್4 ನಿರ್ಮಿಸಲಾಗುತ್ತಿದೆ.

ಇದು ಎಕ್ಸ್3 ಆವೃತ್ತಿಗಿಂತಲೂ ಹೆಚ್ಚು ಕ್ರೀಡಾತ್ಮಕ ಲುಕ್ ಹೊಂದಿರಲಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿದೆ.
ಬಿಎಂಡಬ್ಲ್ಯು ಎಕ್ಸ್4, ರೀಯರ್ ಮತ್ತು ಆಲ್ ವೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಹಾಗಿದ್ದರೂ ಸದ್ಯದಲ್ಲಿ ಎಕ್ಸ್4 ಆವೃತ್ತಿಯನ್ನು ಭಾರತಕ್ಕೆ ಪರಿಚಯಿಸುವ ಯಾವುದೇ ಇರಾದೆಯನ್ನು ಸಂಸ್ಥೆ ಹೊಂದಿಲ್ಲ.
<center><iframe width="100%" height="450" src="//www.youtube.com/embed/fJ6RDxJxHe4" frameborder="0" allowfullscreen></iframe></center>


Click it and Unblock the Notifications