ಬಿಡುಗಡೆಗೂ ಮುನ್ನ ಬೋಲ್ಟ್ ಅಭಿಯಾನ

Written By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್‌ ಮಗದೊಂದು ಬಹುನಿರೀಕ್ಷಿತ ಮಾದರಿ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರನ್ನು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆ. ಇದರಂತೆ ಟಾಟಾ ಸಂಸ್ಥೆಯು ವಿನೂತನ ಅಭಿಯಾನ ಹಮ್ಮಿಕೊಂಡಿದ್ದು, ಗ್ರಾಹಕರಿಗೆ ಬೋಲ್ಟ್ ಬಗ್ಗೆ ಹತ್ತಿರದಿಂದ ಅರಿತುಕೊಳ್ಳಬಹುದಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಜನವರಿ ತಿಂಗಳಾಂತ್ಯದ ವರೆಗೂ ಮುಂದುವರಿಯಲಿದೆ. ಇದು ಟಾಟಾದ ಹೊಸ ಹೊರಿಝೊನೆಕ್ಸ್ಟ್ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿದೆ.

To Follow DriveSpark On Facebook, Click The Like Button
tata bolt

ಬೋಲ್ಟ್ ವಿಶಿಷ್ಟತೆ

  • ಮಲ್ಟಿ ಡ್ರೈವ್: ಸ್ಪೋರ್ಟ್, ಸಿಟಿ ಹಾಗೂ ಇಕೊ ಮೋಡ್
  • ಹೊಚ್ಚ ಹೊಸ ರೆವೊಟ್ರಾನ್ 1.2 ಟರ್ಬೊಚಾರ್ಜ್ಡ್ ಎಂಪಿಎಫ್‌ಐ ಪೆಟ್ರೋಲ್ ಎಂಜಿನ್,
  • ಬಾಷ್ 9ನೇ ಪೀಳಿಗೆ ಎಬಿಎಸ್ ಸುರಕ್ಷತೆ,
  • ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಡ್ಯುಯಲ್ ಏರ್ ಬ್ಯಾಗ್,
  • ಹೆಚ್ಚು ಸ್ಥಳಾವಕಾಶ, ಅನುಕೂಲತೆ
  • ಹರ್ಮಾನ್ ಕನೆಕ್ಟ್ ನೆಕ್ಸ್ಟ್ ಟಚ್ ಸ್ಕ್ರೀನ್ ಇನ್ಫೋನ್ಮೆಂಟ್ ಸಿಸ್ಟಂ

ಈ ಸಂದರ್ಭದಲ್ಲಿ ಅನೇಕ ವಿನೂತನ ಕಾರ್ಯಕ್ರಮಗಳನ್ನು ಟಾಟಾ ಸಂಸ್ಥೆಯು ಆಯೋಜಿಸಲಿದೆ. ಇಲ್ಲಿ ಟಾಟಾ ರೆವೊಟ್ರಾನ್ ಚಾಲೆಂಜ್‌ ಮುಖ್ಯವೆನಿಸಲಿದೆ. ನಿಮ್ಮ ಮಾಹಿತಿಗಾಗಿ ಟಾಟಾ ಸಂಸ್ಥೆಯು ಪರಿಚಯಿಸಿರುವ ಹೊಸತಾದ ರೆವೊ ಟ್ರಾನ್ 1.2 ಟಿ ಎಂಜಿನ್ ಸ್ಪೋರ್ಟ್, ಇಕೊ ಹಾಗೂ ಸಿಟಿಗಳೆಂಬ ಬಹು ಚಾಲನಾ ವಿಧಗಳನ್ನು ಹೊಂದಿರುತ್ತದೆ.

ಅಲ್ಲದೆ ಗ್ರಾಹಕರಿಗಾಗಿ ಇನ್ನೊಂದು ವಿಶಿಷ್ಟ ಸ್ಪರ್ಧೆ ಏರ್ಪಡಿಸಲಾಗಿದ್ದು, ಅದೃಷ್ಟವಂತ ವಿಜೇತರು ಟಾಟಾ ಬೋಲ್ಟ್‌ನ ತಾಜಾ ವೀಡಿಯೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟಾಟಾ ಬೋಲ್ಟ್ ಅಭಿಯಾನ

ಡಿ.23 - ಜ.1 - ಗುರ್ಗಾಂವ್, ಆಂಬಿಯನ್ಸ್ ಮಾಲ್

ಡಿ.23 - ಡಿ.24 - ಲಾಜಿಕ್ಸ್ ಪಾರ್ಸ್, ಸೆಕ್ 62, ನೋಯ್ಡಾ, ಡಿಎಲ್‌ಎಫ್ ಸೈಬರ್ ಗ್ರೀನ್ ಗುರ್ಗಾಂವ್

ಡಿ.26 - ಡಿ.28 - ಟಿಜಿಐಪಿ, ನೋಯ್ಡಾ, ಎಂಜಿಎಫ್ ಮೆಟ್ರೊಪಾಲಿಟನ್, ಗುರ್ಗಾಂವ್

ಡಿ.30 - ಡಿ.31 - ಡಿಎಲ್‌ಎಫ್ ಟವರ್ 8ಬಿ, ಸಿ ಮತ್ು ವಲ್ಡ್ ಟೆಕ್ ಪಾರ್ಕ

ಜ.3 - ಜ.4 - ಶಿಪ್ರಾ ಮಾಲ್, ಗಾಜಿಯಾಬಾದ್ ಮತ್ತು ವರ್ಲಡ್ ಟೆಕ್ ಪಾರ್ಕ್ (ಬಿ ವಿಂಗ್)

ಜ. 7 - ಜ.8 - ಸೈಬರ್ ಹಬ್

ಜ. 8 - ಜ. 11 - ಸಿಇಐಎಫ್ ಆಂಡ್ ಫೋಟೊಫೇರ್,

ಜ. 10 - ಜ.11 - ಆಂಬಿಯನ್ಸ್ ಮಾಲ್, ವಸಂತ್ ಕುಂಜ್ ಮತ್ತು ವಲ್ಡ್ ಟೆಕ್ ಪಾರ್ಕ್ (ಬಿ ವಿಂಗ್)

ಜ. 13 - ಜ.14 - ಬಿಲ್ಡಿಂಗ್ ನಂ.10, ಡಿಎಲ್‌ಎಫ್ ಸೈಬರ್ ಸಿಟಿ

ಜ. 17 - ಜ.18 - ಫೆಸಿಫಇಕ್ ಮಾಲ್, ಸುಭಾಷ್ ನಗರ್ ಮತ್ತು ಫೆಸಿಫಿಕ್ ಮಾಲ್, ಆನಂದ್ ವಿಹಾರ್

ಜ. 20 - ಜ.21 - ಲಾಜಿಕ್ಸ್ ಟೆಕ್ನೋ ಪಾರ್ಕ್, ಸೆಕ್ 127, ನೋಯ್ಡಾ ಆಂಡ್ ಬಿಲ್ಡಂಗ್ 9ಎ, ಡಿಎಲ್‌ಎಫ್ ಸೈಬರ್ ಸಿಟಿ

ಜ. 24 - ಜ.25 - ಡಿಎಲ್‌ಎಫ್, ಪ್ಲೇಸ್ ಆಂಡ್ ಕ್ರೌನ್ ಇಂಟಿರಿಯರ್, ಫರಿದಾಬಾದ್

ಜ. 27 - ಜ.28 - ಗ್ಲೋಬರ್ ಬ್ಯುಸಿನೆಸ್ ಪಾರ್ಕ್, ಗುರ್ಗಾಂವ್ ಮತ್ತು ಯುನಿಟೆಕ್ ಸೈಬರ್ ಪಾರ್ಕ್

English summary
Tata Motors today announced the launch of Bolt Arena in Delhi. The company looks forward to engaging with its customers creatively and has set up the Bolt Arena, a first-of-its-kind interactive hub where customers can take part in various activities to know everything about the new sporty hatchback from Tata Motors, the Bolt
Story first published: Wednesday, December 24, 2014, 12:18 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark