ನ್ಯಾನೋ ಒಂದು ತಾಸಿನ ಪಯಣಕ್ಕೆ ಬರಿ 99 ರು. ಮಾತ್ರ!

By Nagaraja

ಹೌದು, ಇದು ನಿಜ. ರಾಷ್ಟ್ರ ರಾಜಧಾನಿಯಲ್ಲಿ ವಿಶ್ವದ ಅತಿ ಅಗ್ಗದ ಹಾಗೂ ದೇಶದ ಜನ ಸಾಮಾನ್ಯ ಕಾರು ಎಂದೇ ಪ್ರಖ್ಯಾತಿ ಪಡೆದಿರುವ ನ್ಯಾನೋ ಪಯಣ ಇನ್ನು ತುಂಬಾನೇ ಸರಳ. ದೇಶ ಪ್ರಸಿದ್ಧ ಕ್ಯಾಬ್ ಹಾಗೂ ಕಾರು ಬಾಡಿಗೆ ಸಂಸ್ಥೆಯಾಗಿರುವ ಕಾರ್‌ಝೋನ್‌ರೆಂಟ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಭಾರತದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, 'ಮೈಲ್ಸ್ ಸಿಟಿ ಡ್ರೈವ್' ನ್ಯಾನೋ ಟ್ವಿಸ್ಟ್ ಸೇವೆಯನ್ನು ಬಿಡುಗಡೆ ಮಾಡಿದೆ.

ಇದರಂತೆ 200ರಷ್ಟು ನ್ಯಾನೋ ಟ್ವಿಸ್ಟ್ ಕಾರುಗಳನ್ನು ಕಾರ್‌ಝೋನ್‌ರೆಂಟ್‌ಗೆ ಹಸ್ತಾಂತರಿಸಲಾಗುತ್ತದೆ. ಈ ಮೂಲಕ ಆಸಕ್ತ ಗ್ರಾಹಕರು ಬುಕ್ಕಿಂಗ್ ಮಾಡುವ ಮೂಲಕ ವ್ಯಯಕ್ತಿಕ ಚಾಲನೆಗಾಗಿ ಬಳಸಿಕೊಳ್ಳಬಹುದಾಗಿದೆ.

nano

ನವದೆಹಲಿಯ 43 ಕೇಂದ್ರಗಳಲ್ಲಿ ಈ ಸೇವೆ ಲಭ್ಯವಿರಲಿದ್ದು, ಆನ್‌ಲೈನ್ ಅಥವಾ ಫೋನ್ ಮುಖಾಂತರವೂ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಸ್ವಯಂ ಚಾಲನೆಯ ಮೂಲಕ ಗ್ರಾಹಕರ ದೈನಂದಿನ ಬೇಡಿಕೆಗಳನ್ನು ಪೂರೈಸಲು ನ್ಯಾನೋ ನೆರವಾಗಲಿದೆ. ಅಷ್ಟೇ ಯಾಕೆ ಬಾಡಿಗೆ ಅಥವಾ ನಿರ್ವಹಣೆ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ.

ನ್ಯಾನೋ ಟ್ವಿಸ್ಟ್ ಒಂದು ಗಂಟೆಯ ಬುಕ್ಕಿಂಗ್‌ಗಾಗಿ ಬರಿ ರು. 99 ಪಾವಸಿತಿದರೆ ಮಾತ್ರ ಸಾಕು. ಹಾಗೆಯೇ ದಿನವಿಡಿ ಬಳಕೆಗೆ ರು. 399 ಹಾಗೂ ತಿಂಗಳಿಗೆ 6,999 ರು. ನಿಗದಿಯಾಗಿರುತ್ತದೆ. ಪ್ರಸ್ತುತ ಸೇವೆ ಬೆಂಗಳೂರು ಹಾಗೂ ದೇಶದ ಇತರ ನಗರಗಳನ್ನು ಬಹುಬೇಗನೇ ಆವರಿಸಲಿ ಎಂಬುದು ನಮ್ಮ ಆಶಯ!

More from DriveSpark

Article Published On: Friday, October 10, 2014, 8:04 [IST]
English summary
Carzonrent partners with Tata Motors to introduce ‘Myles-City Drive’ with Nano Twist in Delhi NCR
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+