ದೇಶದಲ್ಲೇ ಚಂಡೀಗಡದಲ್ಲಿ ಅತಿ ಹೆಚ್ಚು ವಾಹನ
ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಿಗೆ ಜಂಟಿ ರಾಜಧಾನಿಯಾಗಿರುವ ಚಂಡೀಗಡದಲ್ಲಿ ತಲಾ ಒಬ್ಬನಿಗೆ ಅತಿ ಹೆಚ್ಚು ವಾಹನಗಳಿರುವುದು ದಾಖಲಾಗಿದೆ. ಭಾರತದ ಇತರ ನಗರಗಳಿಗೆ ಹೋಲಿಸಿದರೆ 12 ಲಕ್ಷದಷ್ಟು ಜನಸಂಖ್ಯೆಯಿರುವ ಚಂಡೀಗಡದಲ್ಲಿ 10.5 ಲಕ್ಷ ನೊಂದಾಯಿತ ವಾಹನಗಳಿವೆ.
ಇದರಲ್ಲಿ ಐದು ಲಕ್ಷದಷ್ಟು ನಾಲ್ಕು ಚಕ್ರ ಹಾಗೂ ಉಳಿದವುಗಳೆಲ್ಲ ದ್ವಿಚಕ್ರ ವಾಹನಗಳಾಗಿವೆ. ವರದಿಯ ಪ್ರಕಾರ 50 ವರ್ಷಗಳ ಹಿಂದೆ 1,000ದಷ್ಟು ಮಾತ್ರವಿದ್ದ ವಾಹನ ಸಂಖ್ಯೆಯಲ್ಲಿ ಭಾರಿ ವರ್ಧನೆ ಕಂಡಿದೆ.

ಚಂಡೀಗಡದಲ್ಲಿ ವರ್ಷಂಪ್ರತಿ 50,000ದಷ್ಟು ವಾಹನಗಳನ್ನು ದಾಖಲಾತಿ ಪಡೆಯುತ್ತಿದೆ. ಉದಾಹರಣೆಗಾಗಿ 2013ನೇ ಸಾಲಿನಲ್ಲಿ 45,113, 2012ರಲ್ಲಿ 51,259 ಹಾಗೂ 2011ರಲ್ಲಿ 50,460ರಷ್ಟು ವಾಹನಗಳನ್ನು ನೊಂದಾಯಿಸಿಕೊಂಡಿದ್ದವು.
ಚಂಡೀಗಡ ನಗರ ನಿವಾಸಿಗಳ ವಾಹನ ಖರೀದಿ ಸಾಮರ್ಥ್ಯ ಹೆಚ್ಚಿರುವುದೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ. ಅಷ್ಟೇ ಅಲ್ಲದೆ ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡೀಗಡದಲ್ಲಿ ವಾಹನ ನೊಂದಾಯಿಸಿಕೊಳ್ಳಲು ಅತ್ಯಲ್ಪ ಶುಲ್ಕ ಮಾತ್ರ ತಗಲುತ್ತಿದೆ. ಇನ್ನೊಂದೆಡೆ ವಾಹನಗಳ ಸಾಂದ್ರತೆ ಹೆಚ್ಚಾಗುತ್ತಿರುವುದರಿಂದ ಚಂಡೀಗಡದಲ್ಲಿ ವಾಹನ ದಟ್ಟಣೆ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆಯೂ ಮಾಹಿತಿ ಲಭಿಸಿದೆ.


Click it and Unblock the Notifications








