ಇನ್ನು ಮುಂದೆ ಭಾರತದಲ್ಲೂ ಸಮಗ್ರ 'ಅಪಘಾತ ಪರೀಕ್ಷೆ' ಕಡ್ಡಾಯ
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಐರೋಪ್ಯ ರಾಷ್ಟ್ರಗಳಲ್ಲಿ ಕ್ರಾಶ್ ಟೆಸ್ಟ್ (ಅಪಘಾತ ಪರೀಕ್ಷೆ) ನಡೆಸಿ ಅದರಲ್ಲಿ ತೇರ್ಗಡೆ ಹೊಂದಿದ ಬಳಿಕವಷ್ಟೇ ನೂತನ ಕಾರೊಂದು ರಸ್ತೆ ಪ್ರವೇಶಿಸಲು ಸಾಧ್ಯ. ಆದರೆ ಭಾರತದಲ್ಲಿ ಇದುವರೆಗೆ ಮುಂಭಾಗ ಹಾಗೂ ಹಿಂಭಾಗದಲ್ಲಿ ಮಾತ್ರ ಅಪಘಾತ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಇದರಿಂದಾಗಿ ಸಮಗ್ರ ಕಾರು ಅಪಘಾತ ಪರೀಕ್ಷೆಯಿಂದ ವಂಚಿತವಾಗುತ್ತಿತ್ತು.
ಇದರತ್ತ ಚಿಂತಾಮಗ್ನವಾಗಿರುವ ಕೇಂದ್ರ ಸರಕಾರವು ಪ್ರತಿಯೊಂದು ಕಾರಿನ ರಚನಾ ಸಮಗ್ರತೆ ಹಾಗೂ ಪ್ರಯಾಣಿಕರ ಸುರಕ್ಷತೆಯ ಹಿನ್ನಲೆಯಲ್ಲಿ ಸಮಗ್ರ ಕ್ರಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸುವುದರತ್ತ ಗಮನ ಕೇಂದ್ರಿತವಾಗಿದೆ.

ಇದರಂತೆ ಪ್ರತಿಯೊಂದು ಕಾರುಗಳು ನ್ಯೂ ಕಾರು ಅಸೆಸ್ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಪರೀಕ್ಷೆ ನಡೆಸಬೇಕಾಗಿರುವುದು ಕಡ್ಡಾಯವಾಗಲಿದೆ. ಈ ಸಂಬಂಧ ಅಧಿಕಾರಿಗಳು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್ಸ್ (ಸಿಯಾಮ್) ಸಂಪರ್ಕದಲ್ಲಿದೆ.
ಯುರೋಎನ್‌ಸಿಎಪಿ ಹಾಗೂ ಯುಎಸ್‌ಎಎನ್‌ಸಿಎಪಿಗೆ ಸಮಾನವಾದ ಸುರಕ್ಷತಾ ಪರೀಕ್ಷೆ ಆರಂಭಿಸಲು ಯೋಜನೆ ಹೊಂದಿದ್ದು, ಇದರಂತೆ ಮೂಲ ಸೌಕರ್ಯ ವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.


Click it and Unblock the Notifications








