ರಾಜಕಾರಣಿ, ತಾರೆಗಳಿಗೆ ಸೂಕ್ತವಾದ ಬೆಂಝ್ ಗಾಡಿ
ಲೋಕಸಭಾ ಚುನಾವಣೆ ಮತ್ತೆ ಹತ್ತಿರ ಬಂದಿದೆ. ಈ ಸಂಬಂಧ ಚುನಾವಣಾ ಆಯೋಗವು ಈಗಾಗಲೇ ವಿಜ್ಞಾಪನೆ ಹೊರಡಿಸಿದೆ. ದೇಶದೆಲ್ಲ ರಾಷ್ಟ್ರೀಯ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಚುನಾವಣಾ ಎದುರಿಸಲು ಸಕಲ ರೀತಿಯ ತಯಾರಿಯಲ್ಲಿ ತೊಡಗಿವೆ.
ಶಾರೂಕ್ ಅದ್ದೂರಿ ಬಸ್ಸಲ್ಲಿ ಅಂತದ್ದೇನಿದೆ?
ಈ ಹಿಂದೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳು ಭಾರಿ ವೆಚ್ಚ ಖರ್ಚು ಮಾಡಿದ್ದವು. ಚುನಾವಣಾ ಪ್ರಚಾರಕ್ಕೆಂದೇ ವಿದೇಶಗಳಿಂದ ದುಬಾರಿ ಗಾಡಿಗಳನ್ನು ಆಮದು ಮಾಡಿಕೊಂಡಿದ್ದವು. ಪ್ರಸ್ತುತ ಮಗದೊಮ್ಮೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಹಾಗಿರುವಾಗ ನಮ್ಮ ರಾಜಕಾರಣಿಗಳಿಗೆ ಸೂಕ್ತವಾಗುವ ಗಾಡಿಯೊಂದನ್ನು ನಾವು ಪರಿಚಯಿಸಲಿದ್ದೇವೆ.

ದೇಶದ ಪ್ರತಿಷ್ಠಿತ ಕಸ್ಟಮೈಸ್ಡ್ ಕಂಪನಿಯಾದ ಡಿಸಿ ಡಿಸೈನ್, ಮರ್ಸಿಡಿಸ್ ಸ್ಪ್ರಿಂಟರ್ ಎಂಬ ವ್ಯಾನ್‌ಗೆ ಮರು ವಿನ್ಯಾಸ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.

ನಾಲ್ಕು ಜನರಿಗೆ ಸಂಚರಿಸಬಹುದಾದ ಈ ಬೆಂಝ್ ಗಾಡಿಯಲ್ಲಿ ಎಲ್ಲ ರೀತಿಯ ಐಷಾರಾಮಿ ಸೌಲಭ್ಯಗಳು ಲಭ್ಯವಿರುತ್ತದೆ.

ಇತರ ವ್ಯಾನ್‌ಗಳನ್ನು ಹೋಲಿಸಿದರೆ ಮುಂಭಾಗದಲ್ಲಿ ಬೆಂಝ್ ಲೊಗೊ ದೊಡ್ಡದಾಗಿ ಪ್ರತಿಬಿಂಬಿಸುತ್ತಿದೆ. ಇದರ ಹೆಡ್ ಲೈಟ್‌ಗಳು ತನ್ನದೇ ಆದ ವಿಶಿಷ್ಟ ವಿನ್ಯಾಸ ಕಾಪಾಡಿಕೊಂಡಿದೆ.

ಕೇವಲ ರಾಜಕಾರಣಿಗಳು ಮಾತ್ರವಲ್ಲ. ಸದಾ ಪಯಣದಲ್ಲಿರುವ ದೇಶದ ಪ್ರಖ್ಯಾತ ಉದ್ಯಮಿ ಹಾಗೂ ಸಿನಿಮಾ ತಾರೆಗಳಿಗೂ ಈ ಬೆಂಝ್ ವ್ಯಾನ್ ಹೆಚ್ಚು ಸೂಕ್ತವೆನಿಸುವುದು.

ಈ ಬೆಂಝ್ ಗಾಡಿಯ ಒಳಗಡೆ ಐಷಾರಾಮಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರಲ್ಲಿ ಹೊಂದಾಣಿಸಬಹುದಾದ ಸೀಟು, ಎಸಿ, ಫ್ರಿಡ್ಜ್ ಸೌಲಭ್ಯವಿದೆ.

ಇದನ್ನು ನೀವು ಮಿನಿ ಕಚೇರಿ ರೂಪದಲ್ಲೂ ಬಳಕೆ ಮಾಡಬಹುದಾಗಿದೆ. ಇನ್ನು ವ್ಯಾನ್ ಒಳಗಡೆಯ ಲೈಟಿಂಗ್ಸ್ ಕಾರಿನ ಅಂದತೆಯನ್ನು ಹೆಚ್ಚಿಸಲಿದೆ. ಅದೇ ರೀತಿ ಲ್ಯಾಪ್‌ಟಾಪ್ ಇಡಲು ಟೇಬಲ್ ಹಾಗೂ ವೆಂಟಿಲೇಷನ್ ವ್ಯವಸ್ಥೆಯನ್ನು ಕೊಡಲಾಗಿದೆ.

ಇದೀಗ ಬೆಂಝ್ ಐಷಾರಾಮಿ ಗಾಡಿ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








