ದೆಹಲಿ ರೇಪ್ ಕೇಸ್ ಹಿನ್ನೆಲೆ: ಕ್ಯಾಬ್ ಸೇವೆ ಬ್ಯಾನ್

By Nagaraja

ರಾಷ್ಟ್ರ ರಾಜಧಾನಿ ನವದಹಲಿಯಲ್ಲಿ ನಡೆದ ಉದ್ಯೋಗಸ್ಥ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರಕಾರವು ಉಬೆರ್ ಕ್ಯಾಬ್ ಸೇರಿದಂತೆ ಆಪ್ ತಳಹದಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಕ್ಯಾಬ್ ಸೇವೆಗಳನ್ನು ನಿಷೇಧಿಸಿದೆ.

ದೆಹಲಿಯಲ್ಲಿ ಕಳೆದ ಶುಕ್ರವಾರ 25ರ ಹರೆಯದ ಉದ್ಯೋಗಸ್ಥ ಮಹಿಳೆಯನ್ನು ಉಬೆರ್ ಕ್ಯಾಬ್ ಚಾಲಕ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದನು. ನಿರ್ಭಯ ಅತ್ಯಾಚಾರ ಪ್ರಕರಣದ ಕಹಿ ನೆನಪು ಮಾಸುವ ಮುನ್ನವೇ ಇಂತಹದೊಂದು ಅತ್ಯಾಚಾರ ಪ್ರಕರಣ ದಾಖಲಾಗಿರುವುದು ರಾಜಧಾನಿಯೆಲ್ಲೆಡೆ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.

uber taxi

ಪ್ರಯಾಣಿಕರಲ್ಲಿ ವ್ಯಾಪಕ ಅನನುಕೂಲತೆಗೆ ಕಾರಣವಾಗುತ್ತಿದೆ ಎಂಬ ಬಗ್ಗೆ ಭಾರಿ ಟೀಕೆಗಳು ವ್ಯಕ್ತವಾಗಿದೆ. ಇದರೊಂದಿಗೆ ಉಬೆರ್ ಸೇರಿದಂತೆ ಟ್ಯಾಕ್ಸಿ ಫಾರ್ ಶ್ಯೂರ್, ಒಲಾ, ಕ್ವಿಕ್ ಕ್ಯಾಬ್ಸ್ ಹಾಗೂ ದೆಹಲಿ ಕ್ಯಾಬ್‌ಗಳಿಗೆ 20ರಷ್ಟು ಟ್ಯಾಕ್ಸಿ ಸೇವೆಗಳಿಗೆ ಓಡಾಟಕ್ಕೆ ಬ್ರೇಕ್ ಬಿದ್ದಿದ್ದು, 3,000ದಷ್ಟು ಚಾಲಕರು ಉದ್ಯೋಗ ಕಳೆದುಕೊಳ್ಳುವಂತಾಗಿದೆ.

ದೆಹಲಿ ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದಂತೆ ಈಗ ಈಸಿ ಕ್ಯಾಬ್, ಮೆಗಾ ಕ್ಯಾಬ್, ಮೆರು ಕ್ಯಾಬ್, ಚಾನ್ಸನ್ ಕ್ಯಾಬ್, ಯೊ ಕ್ಯಾಬ್ ಮತ್ತು ಏರ್ ಕ್ಯಾಬ್‌ಗಳಂತಹ ಆರು ಕ್ಯಾಬ್ ಸರ್ವಿಸ್‌ಗಳಿಗೆ ಮಾತ್ರ ಟ್ಯಾಕ್ಸಿ ಓಪರೇಟ್ ಮಾಡುವ ಪರವಾನಗಿ ಲಭ್ಯವಿರುತ್ತದೆ.

ಉಬೆರ್ ತನ್ನದೇ ಆದ ಟ್ಯಾಕ್ಸಿಯಾಗಲಿ ಅಥವಾ ಚಾಲಕರನ್ನಾಗಲಿ ಹೊಂದಿರುವುದಿಲ್ಲ. ಇದು ಚಾಲನ ಪರವಾನಗಿ ಅಥವಾ ತಮ್ಮದೇ ಕಾರುಗಳನ್ನು ಹೊಂದಿರುವ ಮೂರನೇ ವ್ಯಕ್ತಿಯ ಮೂಲಕ ಕಾರ್ಯನಿರ್ವಹಿಸುತ್ತಿದೆ. ಇದೇ ಕಾರಣಕ್ಕಾಗಿ ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವಲ್ಲಿ ವೈಫಲ್ಯ ಅನುಭವಿಸಿದೆ.

ಬೈಕನ್‌ವೀರ್ ಬೈಕರ್ ಬೈಕಿಂಗ್ ಗ್ಲೋವ್ಸ್ - ಕೇವಲ ರು. 340ಕ್ಕೆ ನಿಮ್ಮದಾಗಿಸಿ - ತ್ವರೆ ಮಾಡಿ

More from DriveSpark

Article Published On: Tuesday, December 9, 2014, 10:51 [IST]
English summary
The Delhi government has banned all app-based cab services in New Delhi after the 25 year old woman was allegedly raped in Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+