ಕಡಿಮೆ ಶಕ್ತಿಶಾಲಿ ಡುಕಾಟಿ ಮೊನಸ್ಟರ್ 821 ಅನಾವರಣ

By Nagaraja

ಇಟಲಿ ಮೂಲದ ಪ್ರತಿಷ್ಠಿತ ಶಕ್ತಿಶಾಲಿ ಬೈಕ್ ತಯಾರಕ ಸಂಸ್ಥೆಯಾಗಿರುವ ಡುಕಾಟಿ ನೂತನ ಮೊನಸ್ಟರ್ 821 ಬೈಕ್ ಅನಾವರಣಗೊಳಿಸಿದೆ. ಮಿಡ್ ರೇಂಜ್ ಬೈಕ್‌ಗಳನ್ನು ಪರಿಚಯಿಸುವ ಮೂಲಕ ದರ ಕಡಿತಗೊಳಿಸುವ ಭಾಗವಾಗಿ ನೂತನ ಬೈಕ್ ಅನಾವರಣವಾಗಿದೆ.

ಸಹಜವಾಗಿಯೇ ಸ್ವಲ್ಪ ಅಗ್ಗದ ಡುಕಾಟಿ ಬೈಕ್ ಆಗಿರುವ ಡುಕಾಟಿ 821, ಕಡಿಮೆ ಶಕ್ತಿಶಾಲಿ ಎನಿಸಿಕೊಳ್ಳಲಿದೆ. ಇದು 821 ಸಿಸಿ ಟೆಸ್ಟಾಸ್ಟ್ರೆಟ್ಟಾ 11 ಡಿಗ್ರಿ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 112 ಅಶ್ವಶಕ್ತಿ (89.34 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.


ಬೃಹತ್ ಮೊನಸ್ಟರ್‌ಗಿಂತಲೂ 2.26 ಕೆ.ಜಿ ಹಗುರ ಭಾರದ ಡುಕಾಟಿ 179.5 ಕೆ.ಜಿ ತೂಕವನ್ನಷ್ಟೇ ಹೊಂದಿರಲಿದೆ. ಅಲ್ಲದೆ ವಿಶಿಷ್ಟ ರೀತಿಯ ಎಕ್ಸಾಸ್ಟ್ ಔಟ್ಲೆಟ್ ಪಡೆದುಕೊಂಡಿದೆ.

ಹಾಗಿದ್ದರೂ ಸುರಕ್ಷತೆಯ ವಿಚಾರದಲ್ಲಿ ಡುಕಾಟಿ ಯಾವುದೇ ರಾಜಿಗೂ ತಯಾರಾಗಿಲ್ಲ. ಇದು ಎಂಟು ವಿಧದ ಹೊಂದಾಣಿಸಬಹುದಾದ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಮೂರು ಹಂತದ ಆಂಟಿ ಲಾಕಿಂಗ್ ಬ್ರೇಕಿಂಗ್ ಸಿಸ್ಟಂ ಹಾಗೂ ಮೂರು ಹಂತದ ಆರ್‌ಬಿಡಬ್ಲ್ಯು ರೈಡಿಂಗ್ ಮೋಡ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಅಂದ ಹಾಗೆ ಜುಲೈ ತಿಂಗಳಲ್ಲಿ ಅಮೆರಿಕ ಮಾರುಕಟ್ಟೆ ಪ್ರವೇಶಿಸಲಿರುವ ಹೊಸ ಡುಕಾಟಿ ದರ ಮಾಹಿತಿ ಬಿಡುಗಡೆ ವೇಳೆಯಷ್ಟೇ ತಿಳಿದು ಬರಲಿದೆ.

Ducati Monster

More from DriveSpark

Article Published On: Thursday, May 29, 2014, 12:21 [IST]
English summary
Following its trend of launching mid-range models built using shared components & some common cost cutting measures, the Bologna based performance bike maker Ducati has announced the Monster 821.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+