ರಾಷ್ಟ್ರ ರಾಜಧಾನಿಯಲ್ಲಿ ಪರಿಸರ ಸ್ನೇಹಿ ಇ-ರಿಕ್ಷಾಗಳಿಗೆ ಚಾಲನೆ
ಸುಸ್ಥಿರ ಪರಿಸರ ಬೆಳವಣಿಗೆಯತ್ತ ದಿಟ್ಟ ಹೆಜ್ಜೆಯನ್ನಿಟ್ಟಿರುವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇ-ರಿಕ್ಷಾಗಳಿಗೆ ಚಾಲನೆ ನೀಡಲಾಗಿದೆ. ಈ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇ-ರಿಕ್ಷಾಗಳನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಇದು ಮಾನವರನ್ನು ಎಳೆಯುವ ಮಾನವರ ಅಭ್ಯಾಸಕ್ಕೆ ಕೊನೆಗಾಣಿಸಲಿದ್ದು, ಇದರಿಂದ ತಮ್ಮ ಹಸ್ತಗಳಿಂದ ರಿಕ್ಷಾಗಳನ್ನು ಎಳೆದೊಯ್ಯುವ ದಲಿತರು, ಮುಸ್ಲಿಮರು ಸೇರಿದಂತೆ ಹಿಂದುಳಿದ ವರ್ಗದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ" ಎಂದಿದ್ದಾರೆ.

ಹೊಸತಾದ ಪರಿಸರ ಸ್ನೇಹಿ ಇ-ರಿಕ್ಷಾಗಳಿಗೆ ಕೆಲವು ನಿರ್ದೀಷ್ಟ ಸುರಕ್ಷಾ ಮಾನದಂಡಗಳನ್ನು ಹೊಂದಿರಲಿದೆ. ಇಂತಹ ಇ-ರಿಕ್ಷಾಗಳಲ್ಲಿ ನಾಲ್ಕು ಪ್ರಯಾಣಿಕರಿಗೆ ಮಾತ್ರ ಸಂಚರಿಸುವ ಅವಕಾಶವಿದ್ದು, 40 ಕೆ.ಜಿ.ಗಿಂತಲೂ ಹೆಚ್ಚಿನ ಭಾರವನ್ನು ಎಳೆದೊಯ್ಯುವಂತಿಲ್ಲ.
ಇನ್ನೊಂದೆಡೆ ಇ-ಕಾರ್ಟ್‌ಗಳಲ್ಲಿ 301 ಕೆ.ಜಿ ಭಾರದ ವರೆಗೂ ಸರಕುಗಳನ್ನು ಸಾಗಣೆ ಮಾಡುವ ಅವಕಾಶವಿರುತ್ತದೆ. ಈ ಹಿಂದೆ ಸುರಕ್ಷತಾ ಹಿನ್ನೆಲೆಯಲ್ಲಿ ದೆಹಲಿ ಹೈ ಕೋರ್ಟ್ ಇ-ರಿಕ್ಷಾ ಬಳಕೆಗೆ ನಿಷೇಧ ಹೇರಿತ್ತು.
ಆದರೆ ಇದೀಗ ಇ-ರಿಕ್ಷಾಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ಕೊಡಲಾಗಿದೆ. ಈ ಮೂರು ಚಕ್ರಗಳ ಗಾಡಿ 2000 ವಾಟ್ ಮೋಟಾರು ಪಡೆಯಲಿದ್ದು, ಗಂಟೆಗೆ ಗರಿಷ್ಠ 25 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇಲ್ಲಿ ಗಮನಾರ್ಹ ಸಂಗತಿ ಏನೆಂದರೆ ಸರಕಾರವು ಇ-ರಿಕ್ಷಾಗಳನ್ನು ಚಾಲಕರಿಗೆ ಚಾಲನಾ ಪರವಾನಗಿ ಕಡ್ಡಾಯಗೊಳಿಸಿದೆ.


Click it and Unblock the Notifications








