ಬ್ರಿಟನ್‌ನಲ್ಲಿ ಚಾರ್ಜಿಂಗ್‌ಗೂ ಚಾರ್ಜ್ ಕಟ್ಟಬೇಕಾದ ಪರಿಸ್ಥಿತಿ!

By Nagaraja

ಭಾರತವನ್ನು ಹೋಲಿಸಿದರೆ ಬ್ರಿಟನ್‌ನಲ್ಲಿ ವಿದ್ಯುತ್ ಚಾಲಿತ ವಾಹನಗಳ ಮೂಲಸೌಕರ್ಯ ತುಂಬಾನೇ ಮುಂದುವರಿದಿದೆ. ಅಲ್ಲಿ ಬೇಕಾದಷ್ಟು ಸಾರ್ವಜನಿಕ ಚಾರ್ಜಿಂಗ್ ಪಾಯಿಂಟುಗಳ ಲಭ್ಯವಿದೆ. ಅಂದರೆ ಗ್ರಾಹಕರು ಉಚಿತವಾಗಿ ಚಾರ್ಜ್ ಮಾಡಬಹುದಾದ ಸೌಲಭ್ಯ ಲಭಿಸುತ್ತಿತ್ತು. ಆದರೆ ಇನ್ನು ಮುಂದೆ ಬ್ರಿಟನ್ ಗ್ರಾಹಕರಿಗೂ ಕಂಟಕ ಎದುರಾಗಲಿದ್ದು, ಮುಂದಿನ ವರ್ಷದಿಂದ ಸಬ್ಸಿಡಿ ನೀಡುವುದನ್ನು ಸರಕಾರ ನಿಲುಗಡೆಗೊಳಿಸಲಿದೆ. ಇದರೊಂದಿಗೆ ಬ್ರಿಟನ್ ಗ್ರಾಹಕರು ಶುಲ್ಕ ಕಟ್ಟಬೇಕಾದ ಪರಿಸ್ಥಿತಿ ಬಂದೊದಗಿದೆ.

ಬಹುತೇಕ ಚಾರ್ಜಿಂಗ್ ಪಾಯಿಂಟ್‌ಗಳನ್ನು ಖಾಸಗಿ ವಿಭಾಗವು ಒದಗಿಸುತ್ತಿದೆ. ಬ್ರಿಟನ್‌ ದೇಶದ್ಯಾಂತ 3000ರಷ್ಟು ಇಂತಹ ಚಾರ್ಜಿಂಗ್ ಪಾಯಿಂಟ್‌ಗಳಿವೆ. ಇವುಗಳನ್ನು ಚಾರ್ಚ್‌ಮಾಸ್ಟರ್ ಎನ್ನಲಾಗುತ್ತದೆ. ಅಂತೆಯೇ ಇನ್ನು ಮುಂದೆ ವಿದ್ಯುತ್ ಪೂರೈಕೆಗಾಗಿ ಶುಲ್ಕ ಪಾವತಿಸಬೇಕಾಗುತ್ತದೆ.

 Electric Vehicle

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾರ್ಜ್‌ಮಾಸ್ಟರ್ ಮುಖ್ಯಸ್ಥ ಡೇವಿಡ್ ಮಾರಟೆಲ್, ಇಂದೊಂದು ಉತ್ತಮ ಬೆಳವಣಿಗೆಯಾಗಿದ್ದು, ಈ ಮೂಲಕ ಹೊಸ ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ಹಣ ಒದಗಿಸಬಹುದಲ್ಲದೆ ಈಗಿರುವ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ವಹಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.

ಅಂದ ಹಾಗೆ ಜಗತ್ತಿನ ವಿದ್ಯುತ್ ಚಾಲಿತ ವಾಹನ ಸ್ನೇಹಿ ದೇಶ ಎಂದೇ ಪರಿಗಣಿಸಲ್ಪಟ್ಟಿರುವ ಹಾಲೆಂಡ್‌ನಲ್ಲಿ ಕಳೆದ ವರ್ಷದಿಂದಲೇ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಚಾರ್ಜ್ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆಗಳು ಬ್ರಿಟನ್ ಪ್ರವೇಶಿಸಲಿರುವ ಮಹೀಂದ್ರ ರೇವಾ ಯೋಜನೆಗೆ ಹಿನ್ನಡೆಯಾಗಿ ಪರಿಣಮಿಸಲಿದೆ.

Article Published On: Tuesday, March 18, 2014, 11:21 [IST]
English summary
The majority of public electric vehicle charging points in the U.K (which till now are free for use) will cost users from next year. That's because from next month onwards the U.K government provided subsidy under the ‘Plugged in Places' scheme will come to an end.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+