ಭಾರತದಲ್ಲಿ ಶೇ.40ರಷ್ಟು ವಾಹನ ಬಿಡಿಭಾಗಗಳು ನಕಲಿ
ಅಚ್ಚರಿಗೊಳಿಸುವ ವರದಿಯೊಂದರಲ್ಲಿ ಭಾರತದಲ್ಲಿ ಮಾರಾಟವಾಗುತ್ತಿರುವ ವಾಹನ ಬಿಡಿಭಾಗಗಳಲ್ಲಿ ಶೇಕಡಾ 40ರಷ್ಟು ನಕಲಿ ಉಪಕರಣಗಳಾಗಿದೆ ಎಂಬುದು ಬಹಿರಂಗವಾಗಿದೆ. ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫಾಕ್ಚರಿಂಗ್ ಅಸೋಸಿಯೇಷನ್ (ಎಸಿಎಂಎ) ಬಿಡುಗಡೆ ಮಾದಿರುವ ವರದಿಯಲ್ಲಿ ಈ ಬೆಚ್ಚಿಬೀಳಿಸುವ ಮಾಹಿತಿ ತಿಳಿಸಲಾಗಿದೆ.
ತೀರಾ ಸುಲಭವಾಗಿ ಹೇಳಬೇಕೆಂದರೆ ದೇಶದಲ್ಲಿ ಮಾರಾಟವಾಗುತ್ತಿರುವ ಐದು ಉಪಕರಣಗಳಲ್ಲಿ ಎರಡು ನಕಲಿಯಾಗಿರುತ್ತದೆ. ಅಲ್ಲದೆ 2014 ಮಾರ್ಚ್ ಅಂತ್ಯದ ವರೆಗೆ 35,000 ಕೋಟಿ ರುಪಾಯಿಗಳ ವ್ಯಾಪಾರ ನಡೆಸಲಾಗಿದೆ ಎಂದು ತಿಳಿಸಲಾಗಿದೆ.

ಇವೆಲ್ಲಕ್ಕಿಂತಲೂ ಆತಂಕಕಾರಿ ವಿಷಯವೆಂದರೆ ನಕಲಿ ಉಪಕರಣ ಮಾರಾಟದ ಸಂಖ್ಯೆಯು ಕಳೆದ ಮೂರು ವರ್ಷಗಳಲ್ಲಿ ಗಣನೀಯ ವರ್ಧನೆ ಕಂಡುಬಂದಿದೆ. ಅತಿ ಸಾಮಾನ್ಯವಾಗಿ ಮಾರಾಟವಾಗುತ್ತಿರುವ ಕ್ಲಚ್, ಫಿಲ್ಟರ್ ಲ್ಯಾಂಪ್, ವೈಪರ್, ಬೇರಿಂಗ್, ಸ್ಟೀರಿಂಗ್ ಆರ್ಮ್, ಬ್ರೇಕ್, ಬ್ರೇಕ್ ಲೈನಿಂಗ್ಸ್ ಮುಂತಾದವುಗಳು ಹೆಚ್ಚು ನಕಲಿಯಾಗಿದೆ.
ಇಂತಹ ನಕಲಿ ವ್ಯಾಪಾರದಿಂದಾಗಿ ವಾಹನ ತಯಾರಕರ ಜೊತೆಗೆ ಸರಕಾರಕ್ಕೂ ಹೊಡೆತ ಬೀಳುವಂತಾಗಿದೆ. ಈ ಮೂಲಕ ವಾರ್ಷಿಕವಾಗಿ 2,200 ಕೋಟಿ ರು. ತೆರಿಗೆ ರೂಪದಲ್ಲಿ ನಷ್ಟವಾಗುತ್ತಿದೆ. ಅಲ್ಲದೆ ಶೇಕಡಾ 20ರಷ್ಟು ರಸ್ತೆ ಅಪಘಾತಗಳಿಗೆ ನಕಲಿ ಬಿಡಿಭಾಗಗಳ ಬಳಕೆ ಸಹ ಕಾರಣವಾಗಿದೆ ಎಂದಿದೆ.


Click it and Unblock the Notifications