ಸಿಯೋಲ್‌ನಲ್ಲಿ ಮಹಿಳಾ ಸ್ನೇಹಿ ಪಾರ್ಕಿಂಗ್ ತಾಣ
ದಕ್ಷಿಣ ಕೊರಿಯಾ ರಾಜಧಾನಿ ನಗರವಾಗಿರುವ ಸಿಯೋಲ್‌ನಲ್ಲಿ ಬರೋಬ್ಬರಿ 95 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ಅನೇಕ ಮಹಿಳಾ ಸ್ನೇಹಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಇದರ ಅಂಗವಾಗಿ ಸಿಯೋಲ್ ಮಹಾನಗರ ಪಾಲಿಕೆಯು ಹಲವಾರು ಬದಲಾವಣೆಗಳಿಗೆ ಚಾಲನೆ ನೀಡಿದ್ದು, ಇವುಗಳಲ್ಲಿ ಮಹಿಳೆಯರಿಗಾಗಿ ನಗರಗಳಲ್ಲಿ ಶೌಚಾಲಯ ನಿರ್ಮಾಣ, ಎತ್ತರದ ಮೊನಚಾದ ಹಿಮ್ಮಡಿಯಿರುವ ಪಾದಗಳನ್ನು ಧರಿಸುತ್ತಿರುವ ಮಹಿಳಾ ಸ್ನೇಹಿ ಪಾದಚಾರಿ ಮಾರ್ಗ ಹಾಗೂ ಮಹಿಳಾ ಸ್ನೇಹಿ ಪಾರ್ಕಿಂಗ್ ಪ್ರದೇಶಗಳಂತಹ ಯೋಜನೆಗಳು ಒಳಗೊಂಡಿದೆ.

ಕೊರಿಯನ್ ಟೈಮ್ಸ್ ಪ್ರಕಾರ ಮಹಿಳೆಯರಿಗೆ ಮೀಸಲಾಗಿರುವ ಪಾರ್ಕಿಂಗ್ ತಾಣಗಳು ಪಿಂಕ್ ಬಣ್ಣದಿಂದ ವಿಶೇಷವಾಗಿ ಗೋಚರಿಸಲಿದ್ದು, ಅದರೊಳಗೆ ಮಹಿಳಾ ಲಾಂಛನವಿರಲಿದೆ. ಅಲ್ಲದೆ ಸಾರ್ವತ್ರಿಕವಾಗಿ ಮಹಿಳೆಯರನ್ನು ಗುರುತಿಸುವ ಗುಲಾಬಿ ಹೂ ಹಾಗೂ ಗುಲಾಬಿ ಬಣ್ಣ ಸ್ಕರ್ಟ್ ಇತ್ಯಾದಿ ಚಿಹ್ನೆಗಳು ಒಳಗೊಂಡಿರಲಿದೆ.

ಸಾಮಾನ್ಯ ಪಾರ್ಕಿಂಗ್ ಪ್ರದೇಶಗಳನ್ನು ಹೋಲಿಸಿದಾಗ ಇಂತಹ ಪಾರ್ಕಿಂಗ್ ಜಾಗಗಳು ಹೆಚ್ಚು ಉದ್ದಗಲವನ್ನು ಹೊಂದಿರಲಿದೆ.

ಮಹಿಳೆಯರಿಗೆ ಹೆಚ್ಚು ಸುಖಕರವಾದ ವಾಹನ ಚಾಲನೆ ಪ್ರದಾನ ಮಾಡುವುದು ಇದರ ಹಿಂದಿರುವ ಪ್ರಮುಖ ಉದ್ದೇಶವಾಗಿದೆ ಎಂದು ಸರ್ಕಾರಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಇಂತಹ ಪಾರ್ಕಿಂಗ್ ಪ್ರದೇಶಗಳನ್ನು, ನಗರದ ಪ್ರಮುಖ ಶಾಪಿಂಗ್ ಮಾಲ್ ಮುಂತಾದ ಪ್ರದೇಶಗಳ ಸಮೀಪ ಲಗತ್ತಿಸಲಾಗುತ್ತಿದೆ. ಇದು ಮಹಿಳೆಯರಿಗೆ ಸುಲಭವಾಗಿ ಕಾರ್ಯ ನಿರ್ವಹಿಸಲು ನೆರವಾಗಲಿದೆ.

ಒಟ್ಟಿನಲ್ಲಿ ಕೆಲವು ಪ್ರಗತಿಪರ ಚಿಂತಕರಿಂದ ಮಹಿಳಾ ಪಾರ್ಕಿಂಗ್ ಮೀಸಲು ಜಾಗದ ವಿರುದ್ಧ ಆಕ್ಷೇಪ ಕೂಡಾ ಎದ್ದಿದೆ. ಅಷ್ಟಕ್ಕೂ ಇಂತಹದೊಂದು ಯೋಜನೆ ಭಾರತದಲ್ಲೂ ಕೈಗೊಂಡರೆ ಹೇಗಿರಬಹುದು? ಇದರ ಸಾಧಕ ಬಾಧಕಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ...


Click it and Unblock the Notifications








