ಅಗ್ಗವಾಯ್ತು ಇಕೊಸ್ಪೋರ್ಟ್; ನೂತನ ದರ ಮಾಹಿತಿ ಪಡೆಯಿರಿ
ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಇಕೊಸ್ಪೋರ್ಟ್ ದರವನ್ನು ಕಡಿತಗೊಳಿಸಿರುವ ಫೋರ್ಡ್ ಇಂಡಿಯಾ ಸಂಸ್ಥೆಯು ಗ್ರಾಹಕರಿಗೆ ಸಿಹಿ ತಿನಿಸಿದೆ. ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ನಲ್ಲಿ ಅಬಕಾರಿ ಸುಂಕ ಕಡಿತಗೊಂಡಿರುವ ಬೆನ್ನಲ್ಲೇ ಅಮೆರಿಕ ಮೂಲದ ಇಕೊಸ್ಪೋರ್ಟ್‌ನಿಂದಲೂ ದರ ಇಳಿಕೆ ಘೋಷಣೆಯಾಗಿದೆ.
ಇದರಂತೆ ಇದೀಗ ಇಕೊಸ್ಪೋರ್ಟ್ ಆವೃತ್ತಿಯು ರು. 26,000 ವರೆಗೆ ಅಗ್ಗವಾಗಲಿದೆ. ಅಂದರೆ ಇಕೊಸ್ಪೋರ್ಟ್ ಆರಂಭಿಕ ದರ 5.94 ಲಕ್ಷ ರು.ಗಳಿಗೆ ಆರಂಭವಾಗಲಿದೆ. ಈ ಹಿಂದೆ 6.20 ಲಕ್ಷ ರು.ಗಳಾಗಿದ್ದವು. ಕೇವಲ ಇಕೊಸ್ಪೋರ್ಟ್ ಮಾತ್ರವಲ್ಲ. ದೇಶದಲ್ಲಿ ಲಭ್ಯವಿರುವ ಇತರ ಫೋರ್ಡ್ ಸಣ್ಣ ಕಾರುಗಳ ದರಗಳಲ್ಲೂ ಇಳಿಕೆ ಕಂಡುಬಂದಿದೆ. ವಿತ್ತ ಸಚಿವ ಪಿ.ಚಿದಂಬರಂ ಮಂಡಿಸಿರುವ 2014-15ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಸಣ್ಣ ಕಾರುಗಳ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 12ರಿಂದ 8ಕ್ಕೆ ಇಳಿಕೆಗೊಳಿಸಲಾಗಿತ್ತು.

ಇಕೊಸ್ಪೋರ್ಟ್ ಪರಿಷ್ಕೃತ ದರ ಇಂತಿದೆ
ಡೀಸೆಲ್
ಹಿಂದಿನ ದರ
ಆಂಬಿಯಟ್ 1.5 ಟಿಡಿಸಿಐ ಮ್ಯಾನುವಲ್ - 7.39 ಲಕ್ಷ ರು.
ಟ್ರೆಂಡ್ 1.5 ಟಿಡಿಸಿಐ ಮ್ಯಾನುವಲ್ - 8.26 ಲಕ್ಷ ರು.
ಟೈಟಾನಿಯಂ 1.5 ಟಿಡಿಸಿಐ ಮ್ಯಾನುವಲ್ - 9.22 ಲಕ್ಷ ರು.
ಟೈಟಾನಿಯಂ 1.5 ಟಿಡಿಸಿಐ (ಆಪ್ಷನ್) ಮ್ಯಾನುವಲ್ - 9.75 ಲಕ್ಷ ರು.
ಪರಿಷ್ಕೃತ ದರ ಇಂತಿದೆ
ಆಂಬಿಯಟ್ 1.5 ಟಿಡಿಸಿಐ ಮ್ಯಾನುವಲ್ - 7.13 ಲಕ್ಷ ರು.
ಟ್ರೆಂಡ್ 1.5 ಟಿಡಿಸಿಐ ಮ್ಯಾನುವಲ್ - 8.00 ಲಕ್ಷ ರು.
ಟೈಟಾನಿಯಂ 1.5 ಟಿಡಿಸಿಐ ಮ್ಯಾನುವಲ್ - 8.96 ಲಕ್ಷ ರು.
ಟೈಟಾನಿಯಂ 1.5 ಟಿಡಿಸಿಐ (ಆಪ್ಷನ್) ಮ್ಯಾನುವಲ್ - 9.49 ಲಕ್ಷ ರು.

ಪೆಟ್ರೋಲ್
ಹಿಂದಿನ ದರ
ಆಂಬಿಯಟ್ 1.5 ಟಿಐ-ವಿಸಿಟಿ ಮ್ಯಾನುವಲ್ - 6.20 ಲಕ್ಷ ರು.
ಟ್ರೆಂಡ್ 1.5 ಟಿಐ-ವಿಸಿಟಿ ಮ್ಯಾನುವಲ್ - 7.15 ಲಕ್ಷ ರು.
ಟೈಟಾನಿಯಂ 1.5 ಟಿಐ-ವಿಸಿಟಿ ಮ್ಯಾನುವಲ್ - 8.11 ಲಕ್ಷ ರು.
ಟೈಟಾನಿಯಂ 1.0 ಇಕೊಬೂಸ್ಟ್ ಮ್ಯಾನುವಲ್ - 8.51 ಲಕ್ಷ ರು.
ಟೈಟಾನಿಯಂ 1.0 ಇಕೊಬೂಸ್ಟ್ (ಆಪ್ಷನ್) ಮ್ಯಾನುವಲ್ - 9.04 ಲಕ್ಷ ರು.
ಟೈಟಾನಿಯಂ 1.5 ಟಿಐ-ವಿಸಿಟಿ ಆಟೋಮ್ಯಾಟಿಕ್ - 9.05 ಲಕ್ಷ ರು.
ಪರಿಷ್ಕೃತ ದರ
ಆಂಬಿಯಟ್ 1.5 ಟಿಐ-ವಿಸಿಟಿ ಮ್ಯಾನುವಲ್ - 5.94 ಲಕ್ಷ ರು.
ಟ್ರೆಂಡ್ 1.5 ಟಿಐ-ವಿಸಿಟಿ ಮ್ಯಾನುವಲ್ - 6.89 ಲಕ್ಷ ರು.
ಟೈಟಾನಿಯಂ 1.5 ಟಿಐ-ವಿಸಿಟಿ ಮ್ಯಾನುವಲ್ - 7.85 ಲಕ್ಷ ರು.
ಟೈಟಾನಿಯಂ 1.0 ಇಕೊಬೂಸ್ಟ್ ಮ್ಯಾನುವಲ್ - 8.25 ಲಕ್ಷ ರು.
ಟೈಟಾನಿಯಂ 1.0 ಇಕೊಬೂಸ್ಟ್ (ಆಪ್ಷನ್) ಮ್ಯಾನುವಲ್ - 8.78 ಲಕ್ಷ ರು.
ಟೈಟಾನಿಯಂ 1.5 ಟಿಐ-ವಿಸಿಟಿ ಆಟೋಮ್ಯಾಟಿಕ್ - 8.79 ಲಕ್ಷ ರು.
ಲಾಂಚ್ ಆದ ಬಳಿಕ 60,000 ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಇಕೊಸ್ಪೋರ್ಟ್ ದೇಶದಲ್ಲಿ ಅತಿ ಹೆಚ್ಚು ಬೇಡಿಕೆಯ ಕಾರಾಗಿದ್ದು, ಕಾಯುವಿಕೆ ಅವಧಿ ಎಂಟು ತಿಂಗಳಿಗೂ ಹೆಚ್ಚು ವೃದ್ಧಿಸಿದೆ. ಪ್ರಸ್ತುತ ದರ ಕಡಿತದ ಬೆನ್ನಲ್ಲೇ ಇನ್ನಷ್ಟು ಬೇಡಿಕೆ ಕಾಯ್ದುಕೊಳ್ಳುವ ನಿರೀಕ್ಷೆಯಿದೆ.


Click it and Unblock the Notifications








