ಇಕೊಸ್ಪೋರ್ಟ್ ಬುಕ್ಕಿಂಗ್ ಪುನರಾರಂಭ
ನಿರೀಕ್ಷೆಗೂ ಮೀರಿದ ಬೇಡಿಕೆಯಿಂದಾಗಿ ಕಾಯುವಿಕೆ ಅವಧಿ ಹೆಚ್ಚಿದ ಹಿನ್ನಲೆಯಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಬುಕ್ಕಿಂತ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಲಾಗಿತ್ತು. ಆದರೆ ಮುಂದುವರಿದ ಬೆಳವಣಿಗೆಯಲ್ಲಿ ಸಂಸ್ಥೆಯು ಇಕೊಸ್ಪೋರ್ಟ್ ಬುಕ್ಕಿಂಗ್ ಪ್ರಕ್ರಿಯೆ ಪುನರಾರಂಭಗೊಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಫೋರ್ಡ್, ಇಕೊಸ್ಪೋರ್ಟ್ ಎಲ್ಲ ವೆರಿಯಂಟ್‌ಗಳಿಗೂ ಬುಕ್ಕಿಂಗ್ ಪ್ರಕ್ರಿಯೆ ಪುನರಾರಂಭಗೊಂಡಿರುವುದಾಗಿ ತಿಳಿಸಿದೆ.

ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆಗೂ ಮುನ್ನವೇ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಅಲ್ಲದೆ ದಾಖಲೆ ಸಂಖ್ಯೆಯ ಬುಕ್ಕಿಂಗ್ ಗಿಟ್ಟಿಸಿಕೊಂಡಿತ್ತು. ನೂತನ ತಂತ್ರಜ್ಞಾನ, ಎಂಜಿನ್, ನಿರ್ವಹಣೆ ಹಾಗೂ ಸ್ಟೈಲ್ ಇಕೊಸ್ಪೋರ್ಟ್ ವಾಹನವನ್ನು ಇತರ ಕಾರುಗಳಿಂದ ವಿಭಿನ್ನವಾಗಿಸಿತ್ತು.
ಸಂಸ್ಥೆಯ ಪ್ರಕಾರ ಫೋರ್ಡ್ ಇಂಡಿಯಾ ಪಾಲಿಗೆ ಗೇಮ್ ಚೇಂಜರ್ ಎನಿಸಿಕೊಂಡಿರುವ ಇಕೊಸ್ಪೋರ್ಟ್, ಇದುವರೆಗೆ 50,000 ಯುನಿಟ್‌ಗಳನ್ನು ಹಸ್ತಾಂತರಿಸಲಾಗಿದೆ. ಸದ್ಯ ನಿರ್ಮಾಣ ಸಾಮರ್ಥ್ಯ ಹೆಚ್ಚಿಸುವ ಮೂಲಕ ಕಾಯುವಿಕೆ ಅವಧಿ ಗಣನೀಯವಾಗಿ ತಗ್ಗಿಸುವಲ್ಲಿ ಯಶಸ್ವಿಯಾಗಿದೆ ಎಂದಿದೆ.
ಫೋರ್ಡ್‌ನ ಇಕೊಬೂಸ್ಟ್ ಎಂಜಿನ್ ಜಾಗತಿಕ ಮನ್ನಣೆಗೆ ಪಾತ್ರವಾಗಿದೆ. ಅಲ್ಲದೆ ಭಾರತದಲ್ಲಿ ಬಿಡುಗಡೆಗೊಂಡು ಒಂದು ವರ್ಷದೊಳಗೆ 30ರಷ್ಟು ಪ್ರಶಸ್ತಿಗೆ ಭಾಜನವಾಗಿತ್ತು.


Click it and Unblock the Notifications








