ಜಪಾನ್ ಆಟೋಬಾನ್ ಹೆದ್ದಾರಿ ವಿದೇಶಿ ಬಳಕೆಗೆ ಶುಲ್ಕ ಪಾವತಿ?
ಇನ್ನು ಮುಂದೆ ಜರ್ಮನಿಯ ಹೈ ಸ್ಪೀಡ್ ಆಟೋಬಾನ್ ಹೆದ್ದಾರಿಯಲ್ಲಿ ಪಯಣಿಸುವ ವಿದೇಶಿಯರು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇಂತಹದೊಂದು ಚಿಂತನೆಯನ್ನು ಜರ್ಮನಿ ಆಡಳಿತ ನಡೆಸುತ್ತಿದೆ.
ವಿದೇಶ ದಾಖಲಾತಿ ಸಂಖ್ಯೆಯನ್ನು ಹೊಂದಿದವರಿಗೆ ಶುಲ್ಕ ಅನ್ವಯವಾಗಲಿದ್ದು, 2016ನೇ ಇಸವಿಯಿಂದ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.

ಈಗಿರುವ ನಿಯಮದಂತೆ ಯಾವುದೇ ದೇಶದ ರಿಜಿಸ್ಟ್ರೇಷನ್ ದಾಖಲಾತಿ ಸಂಖ್ಯೆಯನ್ನು ಹೊಂದಿದ್ದರೂ ರಸ್ತೆ ಬಳಕೆಗಾಗಿ ಶುಲ್ಕ ಪಾವತಿಸಬೇಕಾಗಿದೆ. ಈಗಿನ ಹೊಸ ನಿಯಮ ಜಾರಿಗೆ ಬರುವುದರೊಂದಿಗೆ ಆಟೋಬಾನ್ ಹೆದ್ದಾರಿಯ ನಿರ್ವಹಣೆಗೆ ಇನ್ನಷ್ಟು ಸಹಕಾರಿಯಾಗಲಿದೆ.
ಹೊಸ ನಿಯಮದಂತೆ ಜರ್ಮನ್ ದಾಖಲಾತಿ ಹೊಂದಿದ ವಾಹನಗಳ ಶುಲ್ಕ ಮರು ಪಾವತಿಯಾಗಲಿದೆ. ಇದೀಗ ಆಟೋಬಾನ್ ಹೆದ್ದಾರಿಯಲ್ಲಿ 3.5 ಟನ್ ಭಾರದ ಮಿತಿಯೊಳಗೆ ಸಂಚರಿಸುವ ವಾಹನಗಳಿಗೂ ಯಾವುದೇ ಶುಲ್ಕವಿರುವುದಿಲ್ಲ.


Click it and Unblock the Notifications








