ಕೊಲಂಬಿಯಾದಲ್ಲಿ 400 ಕೋಟಿ ಹೂಡಿಕೆ ಮಾಡಲಿರುವ ಹೀರೊ
ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ತನ್ನ ವ್ಯಾಪಾರ ವ್ಯಾಪ್ತಿಯನ್ನು ಜಾಗತಿಕವಾಗಿ ಇನ್ನಷ್ಟು ವಿಸ್ತರಿಸಿಕೊಳ್ಳುತ್ತಿದ್ದು, 2020ರ ವೇಳೆಯಾಗುವಾಗ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟ ಗುರಿ ಹೊಂದಿದೆ.
ಇದರಂತೆ 400 ಕೋಟಿ ರು. ವೆಚ್ಚದಲ್ಲಿ ಕೊಲಂಬಿಯಾದ ಕೌಕಾದ ವೆಲ್ಲ ರಿಕಾ ಪ್ರಾಂತ್ಯದಲ್ಲಿ ನೂತನ ಘಟಕ ತೆರೆಯುವ ಸಲುವಾಗಿ ಅಡಿಗಲ್ಲು ಸ್ಥಾಪಿಸಿದೆ.

ಈ ಸಂಬಂಧ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 17 ಎಕ್ರೆ ಜಾಗವನ್ನು ಹೊಂದಿರುವ ಈ ಹೀರೊ ಘಟಕ 2015ರಲ್ಲಿ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ.
ಕೊಲಂಬಿಯಾ ಘಟಕದಲ್ಲಿ 78,000 ಯುನಿಟ್‌ಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರಲಿದೆ. ಎರಡನೇ ಘಟಕ ತೆರೆಯುವುದರೊಂದಿಗೆ ನಿರ್ಮಾಣ ಸಾಮರ್ಥ್ಯ 1.5 ಲಕ್ಷಕ್ಕೆ ಏರಿಕೆಯಾಗಲಿದೆ.
ಈ ಮೂಲಕ ಲ್ಯಾಟಿನ್ ಅಮೆರಿಕದಲ್ಲಿ ಘಟಕ ಹೊಂದಿರುವ ದೇಶದ ಮೊದಲ ಸಂಸ್ಥೆ ಎನಿಸಿಕೊಳ್ಳಲಿದೆ. ಸದ್ಯ ಜಾಗತಿಕವಾಗಿ 19 ರಾಷ್ಟ್ರಗಳಲ್ಲಿ ಮಾರಾಟ ಹೊಂದಿರುವ ಹೀರೊ, 50 ಲಕ್ಷ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುತ್ತಿರುವ ಏಕಮಾತ್ರ ಸಂಸ್ಥೆಯಾಗಿದೆ.


Click it and Unblock the Notifications








