ಪ್ಯಾರಿಸ್ ಮೋಟಾರು ಶೋದಲ್ಲಿ ಹೋಂಡಾ ಎಚ್‌ಆರ್-ವಿ ಅನಾವರಣ
ಇದೀಗಷ್ಟೇ ಆರಂಭವಾಗಿರುವ ವಿಶ್ವದ ಪ್ರತಿಷ್ಠಿತ ವಾಹನ ಪ್ರದರ್ಶನ ಮೇಳಗಳಲ್ಲಿ ಒಂದಾಗಿರುವ 2014 ಪ್ಯಾರಿಸ್ ಮೋಟಾರು ಶೋದಲ್ಲಿ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಹೊಸ ಎಚ್‌ಆರ್-ವಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು ಪ್ರದರ್ಶನಗೊಳಿಸಿದೆ.
ಭಾರತ ಸೇರಿದಂತೆ ಬೆಳೆದು ಬರುತ್ತಿರುವ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನೇ ಪರಿಗಣಿಸಿರುವ ಹೋಂಡಾ ಸಂಸ್ಥೆಯು ಹೊಸ ಮಾದರಿಯನ್ನು ಅನಾವರಣಗೊಳಿಸಿದೆ.

ಜನಪ್ರಿಯ ಸಿಆರ್-ವಿ ಸಾಲಿನಲ್ಲೇ ಗುರುತಿಸಿಕೊಳ್ಳಲಿರುವ ಎಚ್‌ಆರ್-ವಿ ಮಿನಿ ಎಸ್‌ಯುವಿ ಎನಿಸಿಕೊಳ್ಳಳಿದೆ. ಸದ್ಯದ ಮಾರುಕಟ್ಟೆ ಪರಿಸ್ಥಿತಿಯನ್ನು ಗಮನಿಸಿದಾಗ ಒಂದು ವೇಳೆ ನಿಕಟ ಭವಿಷ್ಯದಲ್ಲೇ ಇದು ಭಾರತ ಮಾರುಕಟ್ಟೆ ಪ್ರವೇಶಿಸಿದರೆ ಅತಿ ಹೆಚ್ಚಿನ ಮನ್ನಣೆಗೆ ಪಾತ್ರವಾಗಲಿದೆ.
ಅಂದ ಹಾಗೆ ಹೊಸ ಎಚ್‌ಆರ್-ವಿ ಯುರೋಪ್ ಮಾರುಕಟ್ಟೆಯನ್ನು 2015 ಮಧ್ಯಂತರ ಅವಧಿಯಲ್ಲಿ ತಲುಪಲಿದೆ. ಇದು ಮ್ಯಾಜಿಕ್ ಆಸನ ವ್ಯವಸ್ಥೆಯನ್ನು ಹೊಂದಿರಲಿದೆ. ಹಾಗೆಯೇ ಎರಡನೇ ಸಾಲಿನ ಆಸನವನ್ನು ಮಡಚಬಹುದಾಗಿದ್ದು, ಈ ಮೂಲಕ ಹೆಚ್ಚು ಲಗ್ಗೇಜ್ ಸ್ಪೇಸ್ ಸಹ ಪಡೆದುಕೊಳ್ಳಬಹುದಾಗಿದೆ.
ಇನ್ನು ಭಾರತದಲ್ಲಿ ಹೋಂಡಾ ಎಚ್‌ಆರ್-ವಿ ಮಾದರಿಯು ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಜೊತೆಗೆ ನಿಸ್ಸಾನ್ ಟೆರನೊ ಹಾಗೂ ಸುಜುಕಿಯಿಂದ ಇನ್ನಷ್ಟೇ ಬಿಡುಗಡೆಯಾಗಲಿರುವ ವಿಟರಾ ಆವೃತ್ತಿಗೂ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








