ಥಾಯ್ಲೆಂಡ್ ಪ್ರವೇಶಿಸಿದ ಹೋಂಡಾ ಎಚ್ಆರ್‌ವಿ ಕಾಂಪಾಕ್ಟ್ ಎಸ್‌ಯುವಿ
ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಥಾಯ್ಲೆಂಡ್‌ನಲ್ಲಿ ಹೊಸ ಎಚ್‌ಆರ್-ವಿ ಕಾಂಪಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸಿದೆ. ಇದು ಭಾರತೀಯ ರುಪಾಯಿ ಮೌಲ್ಯ ಪ್ರಕಾರ 16.77 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.
ಮಹತ್ವವೇನು?
ಎಚ್‌ಆರ್-ವಿ ಎಂಬುದು ಹೋಂಡಾ ಸಿಆರ್-ವಿ ಕ್ರೀಡಾ ಬಳಕೆಯ ವಾಹನದ ಸಣ್ಣ ರೂಪವಾಗಿದೆ. ಸದ್ಯ ಭಾರತದಂತಹ ಬೆಳೆದು ಬರುತ್ತಿರುವ ವಾಹನ ಮಾರುಕಟ್ಟೆಗಳಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಹೋಂಡಾ ಸಿಆರ್-ವಿ ಮತ್ತು ಬ್ರಿಯೊ ಹ್ಯಾಚ್‌ಬ್ಯಾಕ್ ವಿನ್ಯಾಸವನ್ನು ಆಮದು ಮಾಡಿಕೊಂಡು ಹೋಂಡಾ ಎಚ್‌ಆರ್-ವಿ ತಯಾರಿಸಲಾಗಿದೆ.

ಭಾರತ ಪ್ರವೇಶ ಯಾವಾಗ?
ಇದರಿಂದಲೇ ಎಚ್‌ಆರ್-ವಿ ಮಾದರಿಗೆ ಅತಿ ಹೆಚ್ಚಿನ ಬೇಡಿಕೆ ಕಂಡುಬರುವ ನಿರೀಕ್ಷೆಯಿದೆ. ಈ ಬಹುನಿರೀಕ್ಷಿತ ಮಾದರಿ ಭಾರತ ಪ್ರವೇಶಕ್ಕೆ ಸದ್ಯ ಕಾಲ ನಿಗದಿಯಾಗಿಲ್ಲ. ಹಾಗಿದ್ದರೂ ನಿಕಟ ಭವಿಷ್ಯದಲ್ಲೇ ನಿರೀಕ್ಷಿಸಬಹುದಾಗಿದೆ.
ಕೆಲವು ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ವೆಜೆಲ್ ಎಂದು ಎಚ್‌ಆರ್-ವಿ ಗುರುತಿಸಿಕೊಂಡಿದೆ. ಇದು ಶೀಘ್ರದಲ್ಲೇ ಅಮೆರಿಕ ಹಾಗೂ ಯುರೋಪ್ ಖಂಡಗಳನ್ನು ಪ್ರವೇಶಿಸಲಿದೆ. ಈ ನಡುವೆ ಯಾವುದೇ ಸದ್ದಿಲ್ಲದೆ ಥಾಯ್ಲೆಂಡ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಬೆಲೆ
ಥಾಯ್ಲೆಂಡ್‌ನಲ್ಲಿ ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿರುವ ಹೋಂಡಾ ಎಚ್‌ಆರ್-ವಿ 16.77 ಲಕ್ಷ ರು.ಗಳಿಂದ 19.66 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ. ಅಲ್ಲದೆ ವಾರ್ಷಿಕವಾಗಿ 20,000 ಯುನಿಟ್‌ಗಳಷ್ಟು ಮಾರಾಟ ಮಾಡುವ ನಿರೀಕ್ಷೆ ಹೊಂದಿದೆ.
ಎಂಜಿನ್
ಕಾರಿನಡಿಯಲ್ಲಿ 1.8 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 139 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಗರಿಷ್ಠ 172 ಎನ್‌ಎಂ ಟಾರ್ಕ್ ನೀಡಲಿದೆ. ಅಲ್ಲದೆ ಸಿವಿಟಿ ಗೇರ್ ಬಾಕ್ಸ್ ಸಹ ಕಂಡುಬರಲಿದೆ. ಆದರೆ ಸದ್ಯಕ್ಕೆ ಫೋರ್ ವೀಲ್ ಡ್ರೈವ್ ಆಯ್ಕೆ ಲಭ್ಯವಿರುವುದಿಲ್ಲ.

ವೈಶಿಷ್ಟ್ಯಗಳೇನು?
ಇನ್ನುಳಿದಂತೆ ಎಬಿಎಸ್, ಇಬಿಡಿ, ಹಿಲ್ ಸ್ಟಾರ್ಟ್ ಅಸಿಸ್ಟ್, ಆಟೋ ಹೋಲ್ಡ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಡ್ಯುಯಲ್ ಏರ್ ಬ್ಯಾಗ್ ಮುಂತಾದ ಸೌಲಭ್ಯಗಳನ್ನು ಸ್ಟಾಂಡರ್ಡ್ ಆಗಿ ಪಡೆದುಕೊಳ್ಳಲಿದೆ.
ಪ್ರತಿಸ್ಪರ್ಧಿ...
ಹೋಂಡಾ ಎಚ್‌ಆರ್-ವಿ ಭಾರತ ಪ್ರವೇಶಕ್ಕೆ ಕಾಲ ನಿಗದಿಯಾಗದಿದ್ದರೂ ಒಮ್ಮೆ ಎಂಟ್ರಿ ಕೊಟ್ಟಾಗ ಇದು ಫೋರ್ಡ್ ಇಕೊಸ್ಪೋರ್ಟ್, ನಿಸ್ಸಾನ್ ಟೆರನೊ ಮತ್ತು ರೆನೊ ಡಸ್ಟರ್ ಮಾದರಿಗಳಿಗೆ ಸ್ಪರ್ಧಿಯಾಗಲಿದೆ.
ಭಾರತ ಮಾದರಿಯು ಡೀಸೆಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಟ್ರಾನ್ಸ್‌ಮಿಷನ್ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ. ಅಂತೆಯೇ ಸಣ್ಣ ಪೆಟ್ರೋಲ್ ಎಂಜಿನ್ ಕೂಡಾ ಇರುವ ಸಾಧ್ಯತೆಯಿದೆ.


Click it and Unblock the Notifications