ಹೋಂಡಾ ಮೊಬಿಲಿಯೊ ಆರ್‌ಎಸ್ ವರ್ಷನ್ ಬಿಡುಗಡೆ
ಭಾರತದಲ್ಲೇ ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಹೋಂಡಾ ಮೊಬಿಲಿಯೊ ಮಲ್ಟಿ ಪರ್ಪಸ್ ವೆಹಿಕಲ್ ಇಂಡೋನೇಷ್ಯಾದಲ್ಲಿ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದ್ದು, ಈಗಾಗಲೇ 35,000ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿದೆ.
ಇದರಿಂದ ಪುಳಕಿತಗೊಂಡಿರುವ ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, ಅತ್ಯಾಕರ್ಷಕ ಸ್ಪೋರ್ಟಿ ಮೊಬಿಲಿಯೊ ಆರ್‌ಎಸ್ ವರ್ಷನ್ ಅನ್ನು ಇಂಡೋನೇಷ್ಯಾಗೆ ಪರಿಚಯಿಸಿದೆ. ಇದು ಹೋಂಡಾ ಮೊಬಿಲಿಯೊ ಮಾದರಿ ಮಾರಾಟ ವೇಗವನ್ನು ಇನ್ನಷ್ಟು ಹೆಚ್ಚಿಸಲಿದೆ.

ಮ್ಯಾನುವಲ್ ಹಾಗೆಯೇ ಸಿವಿಟಿ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಮೊಬಿಲಿಯೊ ಆರ್‌ಎಸ್ ಲಭ್ಯವಿರಲಿದೆ. ಹಾಗೆಯೇ ಕಡಿಮೆ ವೆರಿಯಂಟ್ ಪರಿಗಣಿಸಿದಾಗ ಹೆಚ್ಚಿನ ಕಾಸ್ಮೆಟಿಕ್ ಬದಲಾವಣೆ ಪಡೆದುಕೊಂಡಿದೆ. ಇದು ಆಕ್ರಮಣಕಾರಿ ನೋಟ, ಹೊಸ ಬಂಪರ್, ಹೊಸ ಗ್ರಿಲ್, ಹೊಸ ಹೆಡ್‌ಲ್ಯಾಂಪ್ ಜತೆಗೆ ಎಲ್‌ಇಡಿ ಡೇಟೈಮ್ ರನ್ನರ್ ಪಡೆದುಕೊಂಡಿದೆ. ಹಾಗೆಯೇ ರೂಫ್ ಸ್ಪಾಯ್ಲರ್, ಬ್ಲ್ಯಾಕ್ ಇಂಟಿರಿಯರ್, ಸುಧಾರಿದ ಸೌಂಡ್ ಸಿಸ್ಟಂ ಸೇರಿದಂತೆ ಸಂಪೂರ್ಣ ಬಾಡಿ ಕಿಟ್ ಸೌಲಭ್ಯವಿರಲಿದೆ.
ಅಂದ ಹಾಗೆ ಹೋಂಡಾ ಮೊಬಿಲಿಯೊ ಆರ್‌ಎಸ್ ವರ್ಷನ್ ಇಂಡೋನೇಷ್ಯಾದಲ್ಲಿ ಅನುಕ್ರಮವಾಗಿ 10.76 (ಸಿವಿಟಿ) ಹಾಗೂ 10.23 ಲಕ್ಷ ರು.ಗಳಷ್ಟು (5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ದುಬಾರಿಯೆನಿಸಲಿದೆ. ಇನ್ನೊಂದೆಡೆ ಭಾರತದ ಗ್ರಾಹಕರು ಈ ಬಹುನಿರೀಕ್ಷಿತ ಕಾರಿನ ಭಾರತ ಎಂಟ್ರಿಯನ್ನು ಕಾದು ನೋಡುತ್ತಿದ್ದಾರೆ.


Click it and Unblock the Notifications








