ದಕ್ಷಿಣ ಕೊರಿಯಾ ಮೂಲದ ಹಾಗೂ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಸಂಸ್ಥೆಯು, ಈ ವರ್ಷಾಂತ್ಯದ ವೇಳೆಯಲ್ಲಿ ತನ್ನೆಲ್ಲ ಮಾದರಿಗಳ ಕಾರುಗಳಿಗೆ ಅತ್ಯಾಕರ್ಷಕ ಆಫರುಗಳನ್ನು ಮುಂದಿಡುತ್ತಿದೆ.
2014 ವರ್ಷಾಂತ್ಯದಲ್ಲಿ ಗ್ರಾಹಕರಿಗೆ ಗರಿಷ್ಠ ಆಫರ್ ನೀಡುವ ಮೂಲಕ ಹೆಚ್ಚಿನ ಮಾರಾಟವನ್ನು ಸಂಸ್ಥೆಯು ಗುರಿಯಿರಿಸಿಕೊಂಡಿದೆ. ಈಗಾಗಲೇ ಎಲೈಟನ್ ಐ20 ಕ್ರಾಸೋವರ್ ಸಿದ್ಧತೆಯಲ್ಲಿರುವ ಸಂಸ್ಥೆಗೆ ಇದು ಇನ್ನಷ್ಟು ಉತ್ತೇಜನ ನೀಡಲಿದೆ. ಅಷ್ಟಕ್ಕೂ ನೀವು ಕೂಡಾ ಹ್ಯುಂಡೈ ಕಾರು ಖರೀದಿ ಮಾಡುವ ಯೋಜನೆಯಲ್ಲಿದ್ದೀರಾ? ಯಾವ ಯಾವ ಮಾದರಿಗಳಿಗೆ ಎಷ್ಟೆಷ್ಟು ಆಫರುಗಳಿವೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...
ಹ್ಯುಂಡೈ ವರ್ಷಾಂತ್ಯದ ಆಫರ್ ತಿಳಿದುಕೊಳ್ಳಲು ಮುಂದುವರಿಯಿರಿ...
ಸ್ಯಾಂಟ್ರೊ
ಹ್ಯುಂಡೈ ಸಂಸ್ಥೆಯ ಪ್ರಕಾರ ಎಂಟ್ರಿ ಲೆವೆಲ್ ಸ್ಯಾಂಟ್ರೊ ಖರೀದಿ ವೇಳೆ ಗ್ರಾಹಕರು ಗರಿಷ್ಠ 38,500 ರು.ಗಳ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.
ಇಯಾನ್
ಹ್ಯುಂಡೈನ ಜನಪ್ರಿಯ ಎಂಟ್ರಿ ಲೆವೆಲ್ ಕಾರುಗಳಲ್ಲಿ ಒಂದಾಗಿರುವ ಇಯಾನ್ ಖರೀದಿ ವೇಳೆ ತಾವು 43,000 ರು.ಗಳ ವರೆಗೆ ಪ್ರಯೋಜನ ಪಡೆಯಬಹುದಾಗಿದೆ.
ಗ್ರಾಂಡ್ ಐ10 ಪೆಟ್ರೋಲ್
ಜನಪ್ರಿಯ ಐ10 ಮಾದರಿಯ ಹೊಸ ರೂಪವಾಗಿರುವ ಐ10 ಪೆಟ್ರೋಲ್ ಖರೀದಿ ವೇಳೆ ನೀವು 14,000 ರು. ವರೆಗೆ ಉಳಿತಾಯ ಮಾಡಬಹುದಾಗಿದೆ.
ಗ್ರಾಂಡ್ ಐ10 ಡೀಸೆಲ್
ಅದೇ ರೀತಿ ಐ10 ಡೀಸೆಲ್ ಖರೀದಿಯಲ್ಲಿ 44,000 ರು. ವರೆಗೆ ಉಳಿತಾಯ ಮಾಡಬಹುದಾಗಿದೆ.
ಎಕ್ಸ್‌ಸೆಂಟ್ ಡೀಸೆಲ್
ಇತ್ತೀಚೆಗಿನ ಸಮಯದಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಮಾದರಿಗೆ ಅತಿ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಈ ಕಾಂಪಾಕ್ಟ್ ಸೆಡಾನ್ ಕಾರಿನ ಡೀಸೆಲ್ ಮಾದರಿಗೆ ಖರೀದಿ ವೇಳೆ 48,000 ರು. ಉಳಿತಾಯ ಮಾಡಬಹುದಾಗಿದೆ.
ಎಕ್ಸ್‌ಸೆಂಟ್ ಪೆಟ್ರೋಲ್
ಹಾಗೆಯೇ ಎಕ್ಸ್‌ಸೆಂಟ್ ಪೆಟ್ರೋಲ್ ಮಾದರಿಯಲ್ಲಿ ರು. 15,000 ವರೆಗೆ ಉಳಿತಾಯ ಮಾಡಬಹುದಾಗಿದೆ.
ವೆರ್ನಾ ಡೀಸೆಲ್
ಅಂತೆಯೇ ವೆರ್ನಾ ಪೆಟ್ರೋಲ್ ಮಾದರಿಯ ಖರೀದಿ ವೇಳೆ ರು. 43,000 ವರೆಗೆ ಉಳಿತಾಯ ಮಾಡಬಹುದಾಗಿದೆ.
ವೆರ್ನಾ ಪೆಟ್ರೋಲ್
ಅಂತೆಯೇ ವೆರ್ನಾ ಪೆಟ್ರೋಲ್ ಮಾದರಿಯ ಖರೀದಿ ವೇಳೆ ರು. 43,000 ವರೆಗೆ ಉಳಿತಾಯ ಮಾಡಬಹುದಾಗಿದೆ.
ಎಲಂಟ್ರಾ
ಇತರ ಹ್ಯುಂಡೈ ಮಾದರಿಗಳನ್ನು ಹೋಲಿಸಿದಾಗ ಎಲಂಟ್ರಾ ಮಾರಾಟ ಸ್ವಲ್ಪ ಕುಸಿತದಲ್ಲಿದೆ. ಇದನ್ನೇ ಮನಗಂಡಿರುವ ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯು ಎಲಂಟ್ರಾ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯ ಖರೀದಿ ವೇಳೆ ತಲಾ 70,000 ರು.ಗಳ ಉಳಿತಾಯ ನೀಡುತ್ತಿದೆ.
ಸೊನಾಟಾ
ಅಂತಿಮವಾಗಿ ಹ್ಯುಂಡೈನ ದುಬಾರಿ ಕಾರುಗಳಲ್ಲಿ ಒಂದಾಗಿರುವ ಸೊನಾಟಾ ಖರೀದಿ ವೇಳೆ ನೀವು 1,60,000 ರು. ವರೆಗೆ ಉಳಿತಾಯ ಮಾಡಬಹುದಾಗಿದೆ.


Click it and Unblock the Notifications