ತುಮಕೂರಿನಲ್ಲಿ ಹ್ಯುಂಡೈ ಡೀಲರ್‌ಶಿಪ್ ಆರಂಭ
ಪ್ರಯಾಣಿಕರ ಕಾರು ತಯಾರಿಕೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ಹಾಗೂ ರಫ್ತು ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು, ತುಮಕೂರಿನ ಶಿರಾಗೇಟ್ ರಸ್ತೆಯಲ್ಲಿ ನೂತನ ವಿತರಕ ಜಾಲ 'ವಿಕಿ ಹುಂಡೈ' ತೆರೆದುಕೊಂಡಿದೆ. ಪ್ರಸ್ತುತ ಶೋ ರೂಂ ಜುಲೈ 17ರಂದು ಕಾರ್ಯಾರಂಭಗೊಂಡಿದೆ.
ಶೋ ರೂಂ ಉದ್ಘಾಟಿಸಿ ಮಾತನಾಡಿದ ಹುಂಡೈ ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷರಾದ ರಾಕೇಶ್ ಶ್ರೀವಾಸ್ತವರವರು, 'ಹುಂಡೈ ಸಂಸ್ಥೆಯ ಮಾರುಕಟ್ಟೆಗೆ ತುಮಕೂರು ನಗರವು ಪ್ರಶಸ್ತ ಸ್ಥಳವಾಗಿದೆ. ಕಂಪನಿಯ ಉತ್ಪನ್ನಗಳಿಗೆ ಅಗಾಧ ಬೇಡಿಕೆಯಿದ್ದು, ಈ ಶೋ ರೂಂ ಆ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಭಾಗದ ಗ್ರಾಹಕರಿಗೆ ನಮ್ಮ ಕಂಪನಿಯ ಸೇವೆಯನ್ನು ಒದಗಿಸಲು ಸಹಕಾರಿಯಾಗಿದೆ' ಎಂದು ಸಂತಸ ವ್ಯಕ್ತಪಡಿಸಿದರು.

ಹುಂಡೈ ಕಂಪನಿಯು ದೇಶದಲ್ಲಿ ಅತಿದೊಡ್ಡ ಮಾರಾಟ ಮತ್ತು ಸೇವಾ ಜಾಲವನ್ನು ಹೊಂದಿದೆ. ದೇಶದಲ್ಲಿ 392 ವಿತರಕರು ಇದ್ದಾರೆ. ಕರ್ನಾಟಕದಲ್ಲಿ ಪ್ರಯಾಣಿಕರ ಕಾರುಗಳಲ್ಲಿ ಶೇ. 23.3ರಷ್ಟು ಮಾರುಕಟ್ಟೆ ಪಾಲು ಹೊಂದಿದೆ ಎಂದವರು ಹೇಳಿದರು.
ಟಿ.ಎಂ.ವಿನಯ್‍ರವರು ಆರಂಭಿಸಿರುವ ಈ ಶೋರೂಂ ಒಟ್ಟು 28,500 ಚದರ ಅಡಿ ವಿಸ್ತೀರ್ಣದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಹುಂಡೈ ಕಂಪನಿಯ ಎಲ್ಲ ವಿಧದ ಕಾರುಗಳನ್ನೂ ಇಲ್ಲಿ ವೀಕ್ಷಿಸಬಹುದಾಗಿದೆ.


Click it and Unblock the Notifications