ಎಲೈಟ್ ಐ20, ಹರ್ಲೆ ಸ್ಟ್ರೀಟ್ 750ಗೆ ವರ್ಷದ ಕಾರು, ಬೈಕ್ ಪ್ರಶಸ್ತಿ

By Nagaraja

'ಭಾರತದ ವರ್ಷದ ಕಾರು 2015' ಹಾಗೂ 'ಭಾರತ ವರ್ಷದ ಬೈಕ್ 2015' ಪ್ರಶಸ್ತಿಗೆ ಅನುಕ್ರಮವಾಗಿ ಹ್ಯುಂಡೈ ಎಲೈಟ್ ಐ20 ಹಾಗೂ ಹರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಪಾತ್ರವಾಗಿದೆ.

ವಾಣಿಜ್ಯ ನಗರ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ 10ನೇ '2015 ಇಂಡಿಯಾ ಕಾರ್ ಆಫ್ ದಿ ಇಯರ್' (ಐಸಿಒಟಿವೈ) ಹಾಗೂ 8ನೇ ಸಾಲಿನ '2015 ಇಂಡಿಯನ್ ಬೈಕ್ ಆಫ್ ದಿ ಇಯರ್' (ಐಎಂಒಟಿವೈ) ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.

ಜೆಕೆ ಟೈರ್ ಆಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಹಾಗೂ ವ್ಯಪಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯಾ ಮತ್ತು ಐಸಿಒಟಿವೈ ಹಾಗೂ ಐಎಂಒಟಿವೈ ಮುಖ್ಯಸ್ಥ ಆಸ್ಪಿ ಬಥೆನಾ ವಿಜೇತ ಹ್ಯುಂಡೈ ಹಾಗೂ ಹರ್ಲೆ ಸಂಸ್ಥೆಯ ಪ್ರತಿನಿಧಿಗಳಿಗೆ ಪ್ರಶಸ್ತಿಗಳನ್ನು ಹಸ್ತಾಂತರಿಸಿದರು.

hyundai elite i20

ಎಂದಿನಂತೆ ಈ ಬಾರಿಯೂ ವರ್ಷದ ಕಾರು ಹಾಗೂ ಬೈಕ್ ಪ್ರಶಸ್ತಿಗೆ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಆದರೆ ಎಲ್ಲ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿರುವ ವಿಶೇಷ ತೀರ್ಪುಗಾರರ ಸಮಿತಿಯು ಪ್ರಶಸ್ತಿಯನ್ನು ಘೋಷಿಸಿದೆ.

ವರ್ಷದ ಕಾರು ವಿಭಾಗದಲ್ಲಿ ಅಂತಿಮ ಹಂತದಲ್ಲಿ ಹ್ಯುಂಡೈ ಎಲೈಟ್ ಐ20, ಮಾರುತಿ ಸುಜುಕಿ ಸಿಯಾಝ್ ಮತ್ತು ಹೋಂಡಾ ಸಿಟಿ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಅದೇ ರೀತಿ ವರ್ಷದ ಬೈಕ್ ವಿಭಾಗದಲ್ಲಿ ಹರ್ಲಿ ಸ್ಟ್ರೀಟ್ 750 ಮಾದರಿಗೆ ಕೆಟಿಎಂ ಆರ್‌ಸಿ 390 ಹಾಗೂ ಸುಜುಕಿ ಜಿಕ್ಸರ್ ಸ್ಪರ್ಧೆ ಒಡ್ಡಿತ್ತು.

ಆದರೆ ಬೆಲೆ, ಇಂಧನ ಕ್ಷಮತೆ, ಶೈಲಿ, ಆರಾಮದಾಯಕ, ಅನುಕೂಲತೆ, ಸುರಕ್ಷತೆ, ನಿರ್ವಹಣೆ, ತಾಂತ್ರಿಕತೆ, ಹಣಕ್ಕೆ ತಕ್ಕ ಮೌಲ್ಯ, ಹೊಂದಾಣಿಕೆ ಹಾಗೂ ಪ್ರಾಯೋಗಿಕವಾಗಿಯೂ ಭಾರತೀಯ ರಸ್ತೆ ಪರಿಸ್ಥಿತಿಗೆ ಎಷ್ಟು ಯೋಗ್ಯ ಎಂಬಿತ್ಯಾದಿ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಪುಗಾರರ ಸಮಿತಿಯು ವಿಜೇತ ಕಾರನ್ನು ಆರಿಸಿದೆ. ಜೆಕೆ ಟೈರ್ ಸಹಯೋಗದಲ್ಲಿ ಐಸಿಒಟಿವೈ ಹಾಗೂ ಐಎಂಒಟಿವೈ ಆಯೋಜನೆಯಾಗುತ್ತಿದೆ.

Harley Davidson street 750

ಹಿಂದಿನ ವರ್ಷದ ವಿಜೇತರು:

ಇಂಡಿಯಾ ಕಾರ್ ಆಫ್ ದಿ ಇಯರ್

  • 2014 - ಹ್ಯುಂಡೈ ಐ10 ಗ್ರಾಂಡ್
  • 2013 - ರೆನೊ ಡಸ್ಟರ್
  • 2012 - ಮಾರುತಿ ಸುಜುಕಿ ಸ್ವಿಫ್ಟ್
  • 2011 - ಫೋರ್ಡ್ ಫಿಗೊ
  • 2010 - ಟಾಟಾ ನ್ಯಾನೋ
  • 2009 - ಹೋಂಡಾ ಸಿಟಿ
  • 2008 - ಹ್ಯುಂಡೈ ಐ20
  • 2007 - ಹೋಂಡಾ ಸಿವಿಕ್
  • 2006 - ಮಾರುತಿ ಸುಜುಕಿ ಸ್ವಿಫ್ಟ್

ಇಂಡಿಯಾ ಬೈಕ್ ಆಫ್ ದಿ ಇಯರ್

  • 2014 - ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್
  • 2013 - ಕೆಟಿಎಂ ಡ್ಯೂಕ್ 200
  • 2012 - ಹೋಂಡಾ ಸಿಬಿಆರ್ 250ಆರ್
  • 2011 - ಹೋಂಡಾ ಸಿಬಿ ಟ್ವಿಸ್ಟರ್
  • 2010 - ಕವಾಸಕಿ ನಿಂಜಾ 250ಆರ್
  • 2009 - ಯಮಹಾ ಆರ್15
  • 2008 - ಬಜಾಜ್ ಪಲ್ಸರ್ 220 ಡಿಟಿಎಸ್-ಎಫ್‌ಐ

More from DriveSpark

Article Published On: Thursday, December 18, 2014, 12:45 [IST]
English summary
It was declared that the 10th ICOTY award would go to Hyundai's Elite i20. The 8th IMOTY award was given to Harley-Davidson's Street 750 cruiser.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+