2015ರಲ್ಲಿ ಹ್ಯುಂಡೈ ಎಲೈಟ್ ಐ20 ಕ್ರಾಸೋವರ್ ಎಂಟ್ರಿ

By Nagaraja

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಹೊಸತಾದ ಸೆಗ್ಮೆಂಟ್‌ವೊಂದು ಭಾರಿ ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಆರಂಭಿಸಿದೆ. ಅದುವೇ 'ಕ್ರಾಸೋವರ್'. [ಕಾರು ದೇಹ ಶೈಲಿಯಲ್ಲಿ ವಿಧಗಳೆಷ್ಟು?]

ಈ ವಿಭಾಗದಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್, ಫಿಯೆಟ್ ಅವೆಂಚ್ಯುರಾ ಹಾಗೂ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಮಾದರಿಗಳು ಈಗಾಗಲೇ ತನ್ನ ಸಾನಿಧ್ಯವನ್ನು ವ್ಯಕ್ತಪಡಿಸಿದೆ.

ಹಾಗಿರುವಾಗ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥಯು ಭಾರತದಲ್ಲಿ ಹೊಸತಾದ ಕ್ರಾಸೋವರ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

elite i20

ಬಲ್ಲ ಮೂಲಗಳ ಪ್ರಕಾರ ಎಲೈಟ್ ಐ20 ಯಶಸ್ಸಿನಿಂದ ಪುಳಕಿತಗೊಂಡಿರುವ ಹ್ಯುಂಡೈ ಸಂಸ್ಥೆಯು ಎಲೈಟ್ ಐ20 ಕ್ರಾಸೋವರ್ ಮಾದರಿಯನ್ನು ಮುಂದಿನ ವರ್ಷಾರಂಭದಲ್ಲಿ ಬಿಡುಗಡೆ ಮಾಡಲಿದೆ. ಅಲ್ಲದೆ ಈಗಾಗಲೇ ಚೆನ್ನೈ ನಗರದಲ್ಲಿ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.

ಹ್ಯುಂಡೈ ಎಲೈಟ್ ಐ20 ಕ್ರಾಸೋವರ್ ಮಾದರಿಯು ಹ್ಯಾಚ್‌ಬ್ಯಾಕ್ ಮಾದರಿಯಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಪಡೆದುಕೊಳ್ಳಲಿದೆ. ಇದು 82 ಬಿಎಚ್‌ಪಿ ಪವರ್ ಉತ್ಪಾದಿಸಲು (115 ಎನ್‌ಎಂ ಟಾರ್ಕ್) ಸಹಕಾರಿಯಾಗಲಿದೆ.

ಇನ್ನು ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾಹಿತಿಯ ಪ್ರಕಾರ ಪ್ರತಿ ಲೀಟರ್‌ಗೆ 18.6 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಇದು 1.4 ಲೀಟರ್ ಡೀಸೆಲ್ ಎಂಜಿನ್ ಸಹ ಪಡೆದುಕೊಳ್ಳಲಿದ್ದು, 89 ಅಶ್ವಶಕ್ತಿ (220 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಲ್ಲದೆ ಪ್ರತಿ ಲೀಟರ್‌ಗೆ 22.54 ಕೀ.ಮೀ. ಮೈಲೇಜ್ ನೀಡಲಿದೆ.

ಇಲ್ಲಿ ಗಮನಾರ್ಹ ವಿಷೆಯವೆಂದರೆ ಆಟೋಮ್ಯಾಟಿಕ್ ಮಾದರಿಯಲ್ಲೂ ಎಲೈಟ್ ಐ20 ಕ್ರಾಸೋವರ್ ಮಾದರಿಯನ್ನು ಫಿಯೆಟ್ ಒದಗಿಸಲಿದೆ. ಹಾಗೆಯೇ ಡೇ ಟೈಮ್ ರನ್ನಿಂಗ್ ಹೆಡ್ ಲೈಟ್ ಕಾರನ್ನು ಹೆಚ್ಚು ಆಕರ್ಷಕವಾಗಿಸಲಿದೆ. ಇನ್ನುಳಿದಂತೆ ಸೈಡ್ ಬಾಡಿ ಕ್ಲಾಡಿಂಗ್, ರೂಫ್ ರೈಲ್, ಸ್ಕಿಡ್ ಪ್ಲೇಟ್, ಹೊಸ ಅಲಾಯ್ ವೀಲ್ ಹಾಗೂ ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು ಲಭ್ಯವಾಗಲಿದೆ.

Article Published On: Monday, December 8, 2014, 12:18 [IST]
English summary
South Korean based manufacturer Hyundai had recently launched their re-designed hatchback in the form of Elite i20. It was launched to replace its predecessor, which had gone through minimal changes since it was launched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+